ಏಕದಿನ, ಟಿ-20 ಕ್ರಿಕೆಟ್ ವೇಗ ಹೆಚ್ಚಿಸಲು ಸ್ಟಾಪ್ ಕ್ಲಾಕ್ ಪರಿಚಯಿಸಿದ ಐಸಿಸಿ

Update: 2023-11-21 17:38 GMT

ಮುಂಬೈ : ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿನ ಆಟವನ್ನು ವೇಗಗೊಳಿಸುವ ಪ್ರಯತ್ನದಲ್ಲಿ ಡಿಸೆಂಬರ್ 2023ರಿಂದ ಎಪ್ರಿಲ್ 2024ರ ತನಕ ಪುರುಷರ ಏಕದಿನ ಹಾಗೂ ಟಿ-20 ಕ್ರಿಕೆಟ್ನಲ್ಲಿ ಪ್ರಾಯೋಗಿಕ ಆಧಾರದಲ್ಲಿ ಸ್ಟಾಪ್ ಕ್ಲಾಕ್ ಅನ್ನು ಪರಿಚಯಿಸಲು ಐಸಿಸಿ ನಿರ್ಧರಿಸಿದೆ.

ಅಹ್ಮದಾಬಾದ್ನಲ್ಲಿ ಮಂಗಳವಾರ ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಓವರ್ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ನಿಯಂತ್ರಿಸಲು ಗಡಿಯಾರವನ್ನು ಬಳಸಲಾಗುತ್ತದೆ. ಹಿಂದಿನ ಓವರ್ ಮುಗಿದ 60 ಸೆಕೆಂಡ್ಗಳಲ್ಲಿ ಬೌಲಿಂಗ್ ತಂಡವು ಮುಂದಿನ ಓವರ್ ಅನ್ನು ಬೌಲ್ ಮಾಡಲು ಸಿದ್ಧವಾಗಿಲ್ಲದಿದ್ದರೆ ಇನಿಂಗ್ಸ್ನಲ್ಲಿ ಮೂರನೇ ಬಾರಿ ಈ ತಪ್ಪು ಮಾಡಿದರೆ ಐದು ರನ್ ಪೆನಾಲ್ಟಿ ವಿಧಿಸಲಾಗುತ್ತದೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News