ತನ್ನದೇ ಬ್ಯಾಟ್‌ನಿಂದ ಪೆಟ್ಟುತಿಂದ ಡೇವಿಡ್ ವಾರ್ನರ್!
ಸಿಡ್ನಿ: ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡುತ್ತಿದ್ದಾಗ ಬ್ಯಾಟ್ ಮುರಿದು ಅವರ ತಲೆಗೆ ಬಡಿದಿರುವ ವಿಚಿತ್ರ ಘಟನೆ ನಡೆದಿದೆ.
ಶುಕ್ರವಾರ ಸಿಡ್ನಿ ಥಂಡರ್ ಹಾಗೂ ಹೊಬಾರ್ಟ್ ಹ್ಯೂರಿಕೇನ್ಸ್ ನಡುವಿನ ಬಿಗ್ ಬ್ಯಾಶ್ ಲೀಗ್(ಬಿಬಿಎಲ್)ಪಂದ್ಯದಲ್ಲಿ ಈ ಘಟನೆ ನಡೆದಿದೆ.
ಸಿಡ್ನಿ ಥಂಡರ್ ಇನಿಂಗ್ಸ್‌ನ 4ನೇ ಓವರ್‌ನಲ್ಲಿ ವಾರ್ನರ್ ಅವರು ಹೊಬಾರ್ಟ್ ತಂಡದ ವೇಗದ ಬೌಲರ್ ರಿಲೆ ಮೆರೆಡಿತ್ ಎಸೆತವನ್ನು ಬಾರಿಸಲು ಮುಂದಾದಾಗ ಚೆಂಡು ಅಪ್ಪಳಿಸಿ ಬ್ಯಾಟ್ ಹ್ಯಾಂಡಲ್ ಮುರಿದುಹೋಯಿತು. ನಂತರ ತುಂಡಾದ ಬ್ಯಾಟ್, ವಾರ್ನರ್ ಅವರ ತಲೆಗೆ ಬಡಿದಿದೆ.
David Warner's bat broke and he's hit himself in the head with it #BBL14 pic.twitter.com/6g4lp47CSu
— KFC Big Bash League (@BBL) January 10, 2025
ವಾರ್ನರ್ ತನ್ನದೇ ಬ್ಯಾಟ್‌ನಿಂದ ಪೆಟ್ಟು ತಿಂದ ನಂತರ ವೀಕ್ಷಕ ವಿವರಣೆಗಾರರು ವಾರ್ನರ್ ತಲೆಯ ಪರೀಕ್ಷೆ ಮಾಡುವ ಅಗತ್ಯವಿದೆ ಎಂದು ತಮಾಷೆ ಮಾಡಿದರು.
ವಿಲಕ್ಷಣ ಘಟನೆಯ ನಂತರ ವಾರ್ನರ್ ಅವರು 66 ಎಸೆತಗಳಲ್ಲಿ ಔಟಾಗದೆ 88 ರನ್ ಗಳಿಸಿದರು. ಸಿಡ್ನಿ ಥಂಡರ್ 6 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿತು.
7 ಇನಿಂಗ್ಸ್‌ಗಳಲ್ಲಿ ಒಟ್ಟು 316 ರನ್ ಗಳಿಸಿರುವ ವಾರ್ನರ್, ಪ್ರಸಕ್ತ ಬಿಬಿಎಲ್ ಋತುವಿನಲ್ಲಿ ಟಾಪ್ ರನ್ ಸ್ಕೋರರ್ ಅಗಿದ್ದಾರೆ.