ಕ್ಯಾನ್ಸರ್ ಗೆದ್ದ ಯುವರಾಜ್ ಸಿಂಗ್ ವೃತ್ತಿಜೀವನ ಮೊಟಕುಗೊಳಿಸಲು ಕೊಹ್ಲಿ ಕಾರಣ: ರಾಬಿನ್ ಉತ್ತಪ್ಪ ಪರೋಕ್ಷ ಆರೋಪ

Update: 2025-01-10 14:49 GMT

ಯುವರಾಜ್ ಸಿಂಗ್ ̧  ವಿರಾಟ್ ಕೊಹ್ಲಿ PC :PTI

ಹೊಸದಿಲ್ಲಿ: ಕ್ಯಾನ್ಸರ್ ಗೆದ್ದ ಯುವರಾಜ್ ಸಿಂಗ್ ನಿವೃತ್ತಿಗೊಳ್ಳಲು ವಿರಾಟ್ ಕೊಹ್ಲಿ ಕಾರಣ ಎಂದು ಭಾರತ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಪರೋಕ್ಷವಾಗಿ ಆರೋಪಿಸಿದ್ದಾರೆ.

2007ರ ಟಿ20 ವಿಶ್ವಕಪ್ ನಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಬಾರಿಸಿದ್ದರಿಂದ ಹಿಡಿದು, 2011ರ ಏಕದಿನ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಆಟದವರೆಗೆ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಹೆಸರನ್ನು ಛಾಪಿಸಿಕೊಂಡಿದ್ದಾರೆ.

ಆದರೆ, ಅವರ ಜೀವನದಲ್ಲಿ ಘಟಿಸಿದ ಅನಿರೀಕ್ಷಿತ ತಿರುವಿನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗ ಯುವರಾಜ್ ಸಿಂಗ್ ವೃತ್ತಿ ಜೀವನ ಬಹುತೇಕ ಅಂತ್ಯಕ್ಕೆ ಸಮೀಪಿಸಿತ್ತು. ಹೀಗಿದ್ದೂ, ಆ ಮಾರಣಾಂತಿಕ ಕ್ಯಾನ್ಸರ್ ಅನ್ನೂ ಗೆದ್ದು ಬೀಗಿದ್ದ ಯುವರಾಜ್ ಸಿಂಗ್, ಭಾರತ ತಂಡಕ್ಕೆ ಮರಳಿದ್ದರು. ಆದರೆ, ಅವರ ವೃತ್ತಿ ಜೀವನ 2019ರಲ್ಲಿ ವಿಷಾದಕರ ರೀತಿಯಲ್ಲಿ ಅಂತ್ಯಗೊಂಡಿತ್ತು.

ಆದರೆ, ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ರಾಬಿನ್ ಉತ್ತಪ್ಪ ಪ್ರಕಾರ, ಯುವರಾಜ್ ಸಿಂಗ್ ಕೇವಲ ಜೀವನದ ಅಡೆತಡೆಯನ್ನು ಮಾತ್ರ ಎದುರಿಸಲಿಲ್ಲ. ಬದಲಿಗೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ ಭಾರತ ತಂಡದ ದಂತಕತೆ ಆಟಗಾರ ಯುವರಾಜ್ ಸಿಂಗ್ ಪಾಲಿಗೆ ನಿವಾರಿಸಿಕೊಳ್ಳಲಾಗದ ಅಡ್ಡಿಯಾದರು ಎನ್ನಲಾಗಿದೆ.

The Lallantop ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ವಿರಾಟ್ ಕೊಹ್ಲಿ, “ನನ್ನ ಅಭಿಪ್ರಾಯದ ಪ್ರಕಾರ, ಅದು ಕೇವಲ ಊಹಾಪೋಹ. ನಾನಿದನ್ನು ಯಾಕೆ ಹೇಳುತ್ತಿದ್ದೇನೆಂದರೆ, ವಿರಾಟ್ ಕೊಹ್ಲಿ ನಾಯಕತ್ವದ ಶೈಲಿಯು ಎಲ್ಲರನ್ನೂ ಒಳಗೊಳ್ಳುತ್ತಿರಲಿಲ್ಲ. ಬದಲಿಗೆ, ಅದು ತುಂಬಾ ವಿಶೇಷವಾಗಿತ್ತು” ಎಂದು ಹೇಳಿದ್ದಾರೆ.

“ನಾನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹೆಚ್ಚು ಪಂದ್ಯಗಳಲ್ಲಿ ಆಡಿಲ್ಲ. ಆದರೆ, ಅವರು ತುಂಬಾ ತುಂಬಾ ವಿಭಿನ್ನ ನಾಯಕ. ಅವರು ಸಾಕಷ್ಟು ನನ್ನ ದಾರಿಯಲ್ಲಿದ್ದರು ಅಥವಾ ಹೆದ್ದಾರಿಯಲ್ಲಿದ್ದರು. ಇತರರೂ ಹಾಗೆ ಎಂದು ಇದರರ್ಥವಲ್ಲ. ಆದರೆ, ಇದು ನಿಮ್ಮ ತಂಡ ಹಾಗೂ ಸಿಬ್ಬಂದಿಗಳನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದಕ್ಕೆ ಸಂಬಂಧಪಟ್ಟಿದ್ದು. ಇದು ಕೇವಲ ಫಲಿತಾಂಶಗಳಿಗೆ ಸಂಬಂಧಪಟ್ಟಿದ್ದಲ್ಲ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬ್ಯಾಟಿಂಗ್ ಮಾಂತ್ರಿಕ, ಮಾಜಿ ನಾಯಕ ವಿರಾಟ್ ಕೊಹ್ಲಿಯ ಉನ್ನತ ದರ್ಜೆಯ ಬೇಲಿಯನ್ನು ದಾಟಲು ಯುವರಾಜ್ ಸಿಂಗ್ ಗೆ ತೀರಾ ಎತ್ತರವಾಯಿತು. ಅದು ಕೊನೆಗೆ ಅವರ ನಿವೃತ್ತಿಯಲ್ಲಿ ಅಂತ್ಯಗೊಂಡಿತು.

“ಯುವರಾಜ್ ಸಿಂಗ್ ನಿದರ್ಶನವನ್ನೇ ತೆಗೆದುಕೊಳ್ಳಿ. ಕ್ಯಾನ್ಸರ್ ಅನ್ನು ಮಣಿಸಿದ್ದ ಅವರು ಅಂತಾರಾಷ್ಟ್ರೀಯ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದರು. ಅವರು ನಮಗಾಗಿ ವಿಶ್ವಕಪ್ ಗೆದ್ದುಕೊಟ್ಟ ವ್ಯಕ್ತಿಯಾಗಿದ್ದರು. ವಾಸ್ತವವಾಗಿ ಎರಡು ವಿಶ್ವಕಪ್ ಗಳನ್ನು ಗೆದ್ದುಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಂತಹ ಆಟಗಾರನ ಹೋರಾಟವನ್ನು ನೀವು ಕಂಡೂ, ಓರ್ವ ನಾಯಕನಾಗಿ ನಿಮ್ಮ ಶ್ವಾಸಕೋಶದ ಸಾಮರ್ಥ್ಯ ಕುಗ್ಗುತ್ತಿದೆ ಎನ್ನುತ್ತೀರಿ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ನನಗೆ ಈ ವಿಷಯಗಳನ್ನು ಯಾರೂ ಹೇಳಿಲ್ಲ. ಇವನ್ನೆಲ್ಲ ನಾನು ಕೇವಲ ಗಮನಿಸಿ ಹೇಳುತ್ತಿದ್ದೇನೆ” ಎಂದೂ ಅವರು ಸಮಜಾಯಿಷಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News