ಐಸಿಸಿ ಟಿ20 ವಿಶ್ವಕಪ್-2024 : ರಾಯಭಾರಿ ಆಗಿ ಶಾಹೀದ್ ಅಫ್ರಿದಿ ನೇಮಕ

Update: 2024-05-24 17:25 GMT

 ಶಾಹಿದ್ ಅಫ್ರಿದಿ | PTI  

ದುಬೈ: ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಜೂನ್‌ನಲ್ಲಿ ಆರಂಭವಾಗಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಶುಕ್ರವಾರ ಪ್ರಕಟಿಸಿದೆ.

ಯುವರಾಜ್ ಸಿಂಗ್, ಕ್ರಿಸ್ ಗೇಲ್ ಹಾಗೂ ಉಸೇನ್ ಬೋಲ್ಟ್ ಅವರನ್ನೊಳಗೊಂಡ ರಾಯಭಾರಿಗಳ ಗುಂಪಿಗೆ ಅಫ್ರಿದಿ ಹೊಸ ಸೇರ್ಪಡೆಯಾಗಿದ್ದಾರೆ.

2007ರಲ್ಲಿ ನಡೆದ ಮೊದಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ತಂಡ ಫೈನಲ್‌ಗೆ ತಲುಪಿ ಭಾರತವನ್ನು ಎದುರಿಸಲು ಹಾಗೂ 2009ರ ಆವೃತ್ತಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ ಆಗುವಲ್ಲಿ ಅಫ್ರಿದಿ ಪ್ರಮುಖ ಪಾತ್ರವಹಿಸಿದ್ದರು.

ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯು ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದೆ. ಮೊದಲ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿರುವುದು ಹಾಗೂ 2009ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿರುವುದು ನನ್ನ ವೃತ್ತಿಜೀವನದ ಕೆಲವು ಸ್ಮರಣೀಯ ಕ್ಷಣಗಳಾಗಿವೆ. ಟಿ20 ವಿಶ್ವಕಪ್ ಇತ್ತೀಚೆಗಿನ ವರ್ಷಗಳಲ್ಲಿ ಸಾಕಷ್ಟು ಬೆಳೆದಿದೆ. ಪ್ರಸಕ್ತ ಆವೃತ್ತಿಯ ಟೂರ್ನಿಯ ಭಾಗವಾಗುತ್ತಿರುವುದಕ್ಕೆ ರೋಮಾಂಚನವಾಗುತ್ತಿದೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ತಂಡಗಳು, ಹೆಚ್ಚು ಪಂದ್ಯಗಳು ಹಾಗೂ ಹೆಚ್ಚು ನಾಟಕೀಯ ಕ್ಷಣವನ್ನು ನಾವು ನೋಡಬಹುದು ಎಂದು ಅಫ್ರಿದಿ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News