ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್: ಶುಭಮನ್ ಗಿಲ್ ಜೀವನಶ್ರೇಷ್ಠ ಸಾಧನೆ

Update: 2023-08-16 15:20 GMT

Photo : ಶುಭಮನ್ ಗಿಲ್ | PTI

ದುಬೈ: ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಬುಧವಾರ ಬಿಡುಗಡೆಯಾದ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್ನಲ್ಲಿ 25ನೇ ಸ್ಥಾನಕ್ಕೇರುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದರು. ಗಿಲ್ ಬ್ಯಾಟಿಂಗ್ ಸಹಪಾಠಿ ಯಶಸ್ವಿ ಜೈಸ್ವಾಲ್ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ರ‍್ಯಾಂಕಿಂಗ್ ನಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದಾರೆ.

ವೆಸ್ಟ್ಇಂಡೀಸ್ ವಿರುದ್ಧ ಐದು ಪಂದ್ಯಗಳ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ 77 ರನ್ ಹಾಗೂ 9 ರನ್ ಗಳಿಸಿದ್ದ ಗಿಲ್ 43 ಸ್ಥಾನಗಳನ್ನು ಏರಿದ್ದಾರೆ.

ಈ ವರ್ಷಾರಂಭದಲ್ಲಿ ಅಹಮದಾಬಾದ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 126 ರನ್ ಗಳಿಸಿದ ನಂತರ ಗಿಲ್ 30ನೇ ಸ್ಥಾನಕ್ಕೇರಿದ್ದರು.

ನಾಲ್ಕನೇ ಟಿ-20 ಪಂದ್ಯದಲ್ಲಿ ಗಿಲ್ ಅವರು ಜೈಸ್ವಾಲ್ರೊಂದಿಗೆ ಮೊದಲ ವಿಕೆಟ್ಗೆ 165 ರನ್ ಗಳಿಸಿದ್ದರು.

ಐಸಿಸಿ ಪ್ರಕಾರ ರಾಕೆಟ್ ವೇಗದಲ್ಲಿ ಪ್ರಗತಿ ಸಾಧಿಸಿರುವ ಜೈಸ್ವಾಲ್ 88ನೇ ಸ್ಥಾನದಲ್ಲಿದ್ದಾರೆ.

ಸ್ಪಿನ್ನರ್ ಕುಲದೀಪ್ ಫ್ಲೋರಿಡಾದಲ್ಲಿ ನಡೆದ 4ನೇ ಪಂದ್ಯದಲ್ಲಿ 2 ವಿಕೆಟ್ ಪಡೆದ ನಂತರ 23 ಸ್ಥಾನ ಭಡ್ತಿ ಪಡೆದು 28ನೇ ರ್ಯಾಂಕಿಗೆ ತಲುಪಿದ್ದಾರೆ.

ಭಾರತ ವಿರುದ್ಧ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿರುವ ವಿಂಡೀಸ್ ಆಟಗಾರರು ತಮ್ಮ ರ್ಯಾಂಕಿಂಗ್ನಲ್ಲಿ ಸುಧಾರಣೆ ಕಂಡಿದ್ದಾರೆ.

ಕೊನೆಯ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೆ 85 ರನ್ ಗಳಿಸಿದ್ದ ಬ್ರೆಂಡನ್ ಕಿಂಗ್ ಐದು ಸ್ಥಾನ ಮೇಲಕ್ಕೇರಿ 13ನೇ ಸ್ಥಾನ ತಲುಪಿದ್ದಾರೆ.ಎರಡು ಸ್ಥಾನ ಮೇಲಕ್ಕೇರಿರುವ ಕೈಲ್ ಮೇಯರ್ಸ್ 45ನೇ ಸ್ಥಾನವನ್ನು ಹಾಗೂ ಶಿಮ್ರೊನ್ ಹೆಟ್ಮೆಯರ್ 16 ಸ್ಥಾನ ಮೇಲಕ್ಕೇರಿ 85ನೇ ಸ್ಥಾನಕ್ಕೆ ಲಗ್ಗೆ ಇಟ್ಟರು.

ಬೌಲರ್ಗಳ ಪೈಕಿ ಅಕೀಲ್ ಹುಸೇನ್ ಇದೀಗ ಮೂರು ಸ್ಥಾನ ಭಡ್ತಿ ಪಡೆದು 11ನೇ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಜೇಸನ್ ಹೋಲ್ಡರ್ 25ನೇ ಸ್ಥಾನದಲ್ಲಿದ್ದಾರೆ. 5ನೇ ಪಂದ್ಯದಲ್ಲಿ 4 ವಿಕೆಟ್ ಗೊಂಚಲು ಪಡೆದ ನಂತರ ರೊಮಾರಿಯೊ ಶೆಫರ್ಡ್ 20 ಸ್ಥಾನಗಳಲ್ಲಿ ಭಡ್ತಿ ಪಡೆದು 63ನೇ ಸ್ಥಾನ ತಲುಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News