ಏಶ್ಯಾ ಕಪ್ ಫೈನಲ್ ; ಭಾರತದ ಸಿರಾಜ್ ದಾಳಿಗೆ ಶ್ರೀಲಂಕಾ ತತ್ತರ
Update: 2023-09-17 11:38 GMT
ಕೊಲಂಬೊ: ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಏಷ್ಯಾಕಪ್ ಫೈನಲ್‌ನ ತನ್ನ 6ನೇ ಓವರ್‌ನಲ್ಲಿ ಶ್ರೀಲಂಕಾದ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ನಾಲ್ಕು ಓವರ್‌ಗಳಲ್ಲಿ 33-7 ಕ್ಕೆ ತತ್ತರಿಸಿತು.
ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲಿ ಮೊದಲ ವಿಕೆಟ್ ಪಡೆದರು.
ಸಿರಾಜ್ ತನ್ನ ಎರಡನೇ ಓವರ್‌ನಲ್ಲಿ ನಿಸ್ಸಾಂಕ, ಸಮರವಿಕ್ರಮ, ಅಸಲಂಕಾ ಮತ್ತು ಧನಂಜಯ ಅವರನ್ನು ಔಟ್ ಮಾಡಿದರು. ಸಿರಾಜ್ 6 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ50 ವಿಕೆಟ್ ಪಡೆದ ಭಾರತದ 4ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.