ಟಿ20 ವಿಶ್ವಕಪ್ ನಲ್ಲಿ ಭಾರತ ಚಾಂಪಿಯನ್ | BCCI ನಿಂದ ನಾಳೆ ವಿಜಯೋತ್ಸವ

Update: 2024-07-03 13:15 GMT

PC :  @ICC

ಮುಂಬೈ : ವಿಶ್ವಕಪ್ ಚಾಂಪಿಯನ್ ಭಾರತ ತಂಡವು ನಾಳೆ ಗುರುವಾರ ಜುಲೈ 4 ರಂದು ಮುಂಬೈನಲ್ಲಿ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಲಿದೆ. ಮುಂಬೈನ ಮರೀನ್ ಡ್ರೈವ್ ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಟೀಮ್ ಇಂಡಿಯಾದ ವಿಶ್ವಕಪ್ ಗೆಲುವನ್ನು ಗೌರವಿಸುವ ವಿಜಯೋತ್ಸವ ಮೆರವಣಿಗೆಗೆ ನಮ್ಮೊಂದಿಗೆ ಸೇರಿಕೊಳ್ಳಿ. ಜುಲೈ 4 ರಂದು ಸಂಜೆ 5ಕ್ಕೆ ಮರೀನ್ ಡ್ರೈವ್ ಮತ್ತು ವಾಂಖೆಡೆ ಕ್ರೀಡಾಂಗಣಕ್ಕೆ ಬಂದು ನಮ್ಮೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿ. ದಿನಾಂಕವನ್ನು ನೆನಪಿಟ್ಟುಕೊಳ್ಳಿ" ಎಂದು ತಿಳಿಸಿದ್ದಾರೆ.

ಬಾರ್ಬಡೋಸ್ ನಲ್ಲಿ ಚಂಡಮಾರುತದ ಪರಿಣಾಮ ಟೀಮ್ ಇಂಡಿಯಾದ ಸ್ವದೇಶ ಪ್ರಯಾಣವು ವಿಳಂಬವಾಗಿತ್ತು ಜುಲೈ 3 ರಂದು ಬಾರ್ಬಡೋಸ್ ನಿಂದ ವಿಶೇಷ ವಿಮಾನದಲ್ಲಿ ಹೊರಟು ಜುಲೈ 4 ರಂದು ತಂಡವು ವಾಪಾಸಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News