ಮೂರನೆಯ ಟೆಸ್ಟ್: 319 ರನ್‌ಗೆ ಆಲೌಟ್ ಆದ ಇಂಗ್ಲೆಂಡ್

Update: 2024-02-17 07:52 GMT

Photo:X/BCCI

ರಾಜ್‌ಕೋಟ್: ಮೂರನೆಯ ಟೆಸ್ಟ್‌ನ ಮೂರನೆಯ ದಿನವಾದ ಇಂದು ಇಂಗ್ಲೆಂಡ್ ತಂಡವು 319 ರನ್‌ಗಳಿಗೆ ಆಲೌಟ್ ಆಗಿದೆ. ಮುಹಮ್ಮದ್ ಸಿರಾಜ್‌ ಅವರ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ಬ್ಯಾಟರ್‌ಗಳು ಹೆಚ್ಚಿನ ಪ್ರತಿರೋಧ ತೋರದೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಸಿರಾಜ್‌ 4 ವಿಕೆಟ್‌ ಪಡೆದು ಮಿಂಚಿದರು.

126 ರನ್‌ಗಳ ಮುನ್ನಡೆಯೊಂದಿಗೆ ಎರಡನೆ ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು, ಇತ್ತೀಚಿನ ವರದಿಗಳ ಪ್ರಕಾರ, ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ‌.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News