ವಿಶ್ವಕಪ್ ನಲ್ಲಿ ಫೀಲ್ಡಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Update: 2023-10-08 18:26 GMT

ಚೆನ್ನೈ: ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ರವಿವಾರ ಚೆನ್ನೈನಲ್ಲಿ ಎದುರಿಸುವ ಮೂಲಕ ಭಾರತವು ವಿಶ್ವಕಪ್ ನಲ್ಲಿ ತನ್ನ ಅಭಿಯಾನ ಆರಂಭಿಸಿದೆ. ಭಾರತ ಆಡಿರುವ ಐಸಿಸಿ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಹತ್ವದ ದಾಖಲೆಗೆ ಸಾಕ್ಷಿಯಾದರು. ಟೂರ್ನಮೆಂಟ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಕ್ಯಾಚ್ ಗಳನ್ನು ಪಡೆದ ಔಟ್ ಫೀಲ್ಡರ್ ಎಂಬ ಕೀರ್ತಿಗೆ ಭಾಜನರಾದರು.

ಪಂದ್ಯದ 3ನೇ ಓವರ್ ನಲ್ಲಿ ಮಿಚೆಲ್ ಮಾರ್ಷ್ ಅವರು ವೇಗಿ ಜಸ್ಪ್ರೀತ್ ಬುಮ್ರಾ ಎಸೆತವನ್ನು ಕೆಣಕಲು ಹೋದಾಗ ಸ್ಲಿಪ್ ನಲ್ಲಿ ಫೀಲ್ಡಿಂಗ್ ನಿರತರಾಗಿದ್ದ ಕೊಹ್ಲಿ ಅದ್ಭುತ ಕ್ಯಾಚ್ ಪಡೆದರು. ತನ್ನ ಎಡಭಾಗಕ್ಕೆ ಜಿಗಿದ ಕೊಹ್ಲಿ ತನ್ನೆರಡು ಕೈಗಳಿಂದ ಚೆಂಡನ್ನು ಪಡೆದರು.

ಕೊಹ್ಲಿ ತಾನಾಡಿದ 28ನೇ ವಿಶ್ವಕಪ್ ಪಂದ್ಯದಲ್ಲಿ 15ನೇ ಕ್ಯಾಚ್ ಪಡೆದರು. ಭಾರತದ ಪರ 14 ಕ್ಯಾಚ್ ಗಳನ್ನು ಪಡೆದಿದ್ದ ಅನಿಲ್ ಕುಂಬ್ಳೆ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ಪಟ್ಟಿಯಲ್ಲಿ ಕುಂಬ್ಳೆಯ ನಂತರ ಹಿರಿಯ ಕ್ರಿಕೆಟಿಗರಾದ ಕಪಿಲ್ದೇವ್ ಹಾಗೂ ಸಚಿನ್ ತೆಂಡುಲ್ಕರ್ ಅವರಿದ್ದಾರೆ. ಕಪಿಲ್ ಹಾಗೂ ಸಚಿನ್ ತಲಾ 12 ಕ್ಯಾಚ್ ಗಳನ್ನು ಪಡೆದಿದ್ದಾರೆ.

ಏಕದಿನ ವಿಶ್ವಕಪ್ ನಲ್ಲಿ ಭಾರತದ ಪರ ಗರಿಷ್ಠ ಕ್ಯಾಚ್ ಪಡೆದವರು (ವಿಕೆಟ್ ಕೀಪರ್ ಅಲ್ಲದವರು)

15-ವಿರಾಟ್ ಕೊಹ್ಲಿ

14- ಅನಿಲ್ ಕುಂಬ್ಳೆ

12-ಕಪಿಲ್ ದೇವ್

12-ಸಚಿನ್ ತೆಂಡುಲ್ಕರ್

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News