ಏಶ್ಯನ್ ಗೇಮ್ಸ್‌ ನಲ್ಲಿ ಮುಂದುವರಿದ ಭಾರತದ ಪದಕ ಬೇಟೆ

Update: 2023-09-30 18:34 GMT

Photo : Athletics Federation of India

ಏಶ್ಯನ್ ಗೇಮ್ಸ್ನ 7ನೇ ದಿನವಾದ ಶನಿವಾರ ಭಾರತವು 2 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕವನ್ನು ಜಯಿಸಿದೆ. ಅಗ್ರ ಶ್ರೇಯಾಂಕದ ಭಾರತದ ಪುರುಷರ ಸ್ಕ್ವಾಷ್ ತಂಡ ಪಾಕಿಸ್ತಾನವನ್ನು 2-1 ಅಂತರದಿಂದ ಮಣಿಸಿ ಚಿನ್ನದ ಪದಕ ಜಯಿಸಿತು. ಭಾರತದ ಟೆನಿಸ್ ಜೋಡಿ ರೋಹನ್ ಬೋಪಣ್ಣ ಹಾಗೂ ಋತುಜಾ ಭೋಸಲೆ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಸ್ವರ್ಣ ಜಯಿಸಿದರು. ಭಾರತದ ಶೂಟರ್ಗಳಾದ ಸರಬ್ಜೋತ್ ಸಿಂಗ್ ಹಾಗೂ ದಿವ್ಯಾ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚೀನಾದ ವಿರುದ್ದ ಸೋಲನುಭವಿಸಿ ಬೆಳ್ಳಿ ಗೆದ್ದರು. 10,000 ಮೀ.ಓಟದಲ್ಲಿ ಕಾರ್ತಿಕ್ಕುಮಾರ್ ಹಾಗೂ ಗುಲ್ವೀರ್ ಸಿಂಗ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

10,000 ಮೀ. ಓಟ: ಭಾರತದ ಕಾರ್ತಿಕ್ ಕುಮಾರ್ಗೆ ಬೆಳ್ಳಿ, ಗುಲ್ವೀರ್ ಸಿಂಗ್ಗೆ ಕಂಚು

ಭಾರತದ ಓಟಗಾರರಾದ ಕಾರ್ತಿಕ್ ಕುಮಾರ್ ಹಾಗೂ ಗುಲ್ವೀರ್ ಸಿಂಗ್ ಏಶ್ಯನ್ ಗೇಮ್ಸ್ನಲ್ಲಿ ಶನಿವಾರ ಪುರುಷರ 10,000 ಮೀಟರ್ ಓಟದ ಸ್ಪರ್ಧೆಯ ಫೈನಲ್ನಲ್ಲಿ 2ನೇ ಹಾಗೂ ಮೂರನೇ ಸ್ಥಾನ ಪಡೆದು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿದರು.

ಕಾರ್ತಿಕ್ 28:15.38 ಸೆಕೆಂಡ್ನಲ್ಲಿ ಗುರಿ ತಲುಪಿ ಬೆಳ್ಳಿಗೆ ಮುತ್ತಿಟ್ಟರು. ಗುಲ್ವೀರ್ 28:17.21 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕಂಚಿಗೆ ಕೊರಳೊಡ್ಡಿದರು. ಬಹರೈನ್ನ ಬಿರ್ಹಾನು ಯೆಮತಾವ್ ಬಲೆವ್ 28:13.62 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಮುರಳಿ ಶ್ರೀಶಂಕರ್ ಪುರುಷರ ಲಾಂಗ್ಜಂಪ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಜ್ಯೋತಿ ಯರ್ರಾಜಿ ಅವರು ಮಹಿಳೆಯರ 100 ಮೀ.ಹರ್ಡಲ್ಸ್ನಲ್ಲಿ ಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಲವ್ಲೀನಾ ಬೋರ್ಗೊಹೈನ್, ಪ್ರೀತಿ ಪವಾರ್ ಸೆಮಿ ಫೈನಲ್ಗೆ ಪದಕ ಖಚಿತ 

ಏಶ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಲವ್ಲೀನಾ ಬೋರ್ಗೊಹೈನ್ ಹಾಗೂ ಪ್ರೀತಿ ಪವಾರ್ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಪದಕವನ್ನು ಖಚಿತಪಡಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ 75 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲ್ಲಿ ಲವ್ಲೀನಾ ದಕ್ಷಿಣ ಕೊರಿಯಾದ ಸುಯೆನ್ ಸಿಯೊಂಗ್ರನ್ನು 5-0 ಅಂತರದಿಂದ ಸೋಲಿಸಿದರು. ಮಹಿಳೆಯರ 54 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ 19ರ ಹರೆಯದ ಪ್ರೀತಿ ಪವಾರ್ ಅವರು ಕಝಕ್ಸ್ತಾನದ ಝೈನಾ ಶೆಕರ್ಬೆಕೋವಾರನ್ನು 4-1 ಅಂತರದಿಂದ ಸೋಲಿಸಿ ಸೆಮಿ ಫೈನಲ್ಗೆ ಪ್ರವೇಶಿಸಿದರು. ಮಾತ್ರವಲ್ಲ 2024ರ ಪ್ಯಾರಿಸ್ ಒಲಿಂಪಿಕ್ಸ್ಗೂ ಅರ್ಹತೆ ಪಡೆದಿದ್ದಾರೆ.

ಏಶ್ಯನ್ ಗೇಮ್ಸ್ನಲ್ಲಿ ಮೀರಾಬಾಯಿ ಚಾನು ಅಭಿಯಾನ ಅಂತ್ಯ 

ಭಾರತದ ಸ್ಟಾರ್ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರ ಏಶ್ಯನ್ ಗೇಮ್ಸ್ ಅಭಿಯಾನವು ನೋವಿನೊಂದಿಗೆ ಅಂತ್ಯ ಕಂಡಿತು. ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಚಾನು ತೂಕವನ್ನು ಎತ್ತಿ ಹಿಡಿಯುವಲ್ಲಿ ವಿಫಲರಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಶನಿವಾರ ಮಹಿಳೆಯರ 49 ಕೆಜಿ ಸ್ಪರ್ಧೆಯಲ್ಲಿ ಚಾನು ಭಾರವನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ ಕಂಚಿನ ಪದಕವಾದರೂ ಲಭಿಸುತ್ತಿತ್ತು. ಸ್ನಾಚ್ ವಿಭಾಗದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಚಾನು ಒತ್ತಡದಲ್ಲಿದ್ದರು. ಚಾನು ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 117 ಕೆಜಿ ತೂಕ ಎತ್ತಲು ಯತ್ನಿಸಿದ್ದರು. ಆದರೆ ಎರಡು ಬಾರಿಯೂ ವಿಫಲರಾದರು. ಚಾನು ಯಶಸ್ವಿಯಾಗಿ ತೂಕ ಎತ್ತುತ್ತಿದ್ದರೆ ಕಂಚಿನ ಪದಕ ಲಭಿಸುತ್ತಿತ್ತು. ಚಾನು ತನ್ನ ಅಂತಿಮ ಪ್ರಯತ್ನದಲ್ಲಿ ಹಿಮ್ಮುಖವಾಗಿ ಬಿದ್ದರು. ಆಗ ಕೋಚಿಂಗ್ ಸಿಬ್ಬಂದಿ ಅವರ ಸಹಾಯಕ್ಕೆ ಧಾವಿಸಿದರು. ಚಾನು ಒಟ್ಟು 191 ಕೆಜಿ(83 ಕೆಜಿ+108 ಕೆಜಿ) ಎತ್ತಿ ಹಿಡಿದು 4ನೇ ಸ್ಥಾನ ಪಡೆದರು.

ಉತ್ತರ ಕೊರಿಯಾದ ರಿ ಸಾಂಗ್-ಗುಮ್ ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 124 ಕೆಜಿ ಎತ್ತಿ ವಿಶ್ವ ದಾಖಲೆಯೊಂದಿಗೆ ಏಶ್ಯನ್ ಗೇಮ್ಸ್ ಚಿನ್ನವನ್ನು ತನ್ನಲ್ಲೇ ಉಳಿಸಿಕೊಂಡರು. ಸಾಂಗ್-ಗುಮ್ ಒಟ್ಟು 216 ಕೆಜಿ(92+124 ಕೆಜಿ)ಎತ್ತಿ ಹಿಡಿದು ಮೊದಲ ಸ್ಥಾನ ಪಡೆದರು. ಚೀನಾದ ಹುಯ್ಹುವಾ(94+115ಕೆಜಿ)ಬೆಳ್ಳಿ ಪದಕ ಜಯಿಸಿದರು. ಥಾಯ್ಲೆಂಡ್ನ ಸುಕಚಾರೊಯ್ (199ಕೆಜಿ)ಕಂಚು ಜಯಿಸಿದರು.

ಟೇಬಲ್ ಟೆನಿಸ್ ಮಹಿಳೆಯರ ಡಬಲ್ಸ್: ಸೆಮಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ ಸುತೀರ್ಥ-ಐಹಿಕಾ

ಹಾಂಗ್ ಝೌ: ವಿಶ್ವ ಚಾಂಪಿಯನ್ ಚೀನಾದ ಜೋಡಿ ಚೆನ್ ಮೆಂಗ್ ಹಾಗೂ ಯಿಡಿ ವಾಂಗ್ ರನ್ನು ಮಣಿಸಿದ ಭಾರತದ ಟೇಬಲ್ ಟೆನಿಸ್ ಆಟಗಾರ್ತಿಯರಾದ ಸುತೀರ್ಥ ಮುಖರ್ಜಿ ಹಾಗೂ ಐಹಿಕಾ ಮುಖರ್ಜಿ ಏಶ್ಯನ್ ಗೇಮ್ಸ್ ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟು ಇತಿಹಾಸ ನಿರ್ಮಿಸಿದ್ದಾರೆ.

ಈ ಗೆಲುವಿನ ಮೂಲಕ ಭಾರತವು ಟೂರ್ನಮೆಂಟ್ನಲ್ಲಿ ಟೇಬಲ್ ಟೆನಿಸ್ ನಲ್ಲಿ ಐತಿಹಾಸಿಕ ಪದಕವನ್ನು ಖಚಿತಪಡಿಸಿತು. ಶನಿವಾರ ಪೈಪೋಟಿಯಿಂದ ಕೂಡಿದ್ದ ಕ್ವಾರ್ಟರ್ ಫೈನಲ್ ನಲ್ಲಿ ಸುತೀರ್ಥ ಹಾಗೂ ಐಹಿಕಾ ಜೋಡಿ 11-5, 11-5, 5-11, 11-9 ಅಂತರದಿಂದ ಜಯ ಸಾಧಿಸಿತು. ವಿಶ್ವದ ನಂ.2ನೇ ಚೀನಾ ಜೋಡಿ ವಿರುದ್ಧ ಗೆಲುವು ಮಹತ್ವ ಪಡೆದಿದ್ದು, ಭಾರತವು ಏಶ್ಯನ್ ಗೇಮ್ಸ್ ನಲ್ಲಿ ಈ ಮೊದಲು ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಪದಕವನ್ನು ಜಯಿಸಿಲ್ಲ.

ಇದಕ್ಕೂ ಮೊದಲು ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಮಣಿಕಾ ಬಾತ್ರಾ ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯ ಕ್ವಾರ್ಟರ್ ಫೈನಲ್ನಲ್ಲಿ ಸೋತು ನಿರ್ಗಮಿಸಿದ್ದಾರೆ. ಮಣಿಕಾ ಚೀನಾದ ವಿಶ್ವದ ನಂ.4ನೇ ಆಟಗಾರ್ತಿ ವಾಂಗ್ ವಿರುದ್ಧ 8-11, 12-10, 6-11, 4-11, 14-12, 5-11 ಅಂತರದಿಂದ ಸೋತಿದ್ದಾರೆ.

ಕುಶಾಲ್ ಪೆರೇರಗೆ ಗಾಯದ ಸಮಸ್ಯೆ: ವಿಶ್ವಕಪ್ ಗೆ ಮೊದಲು ಶ್ರೀಲಂಕಾಕ್ಕೆ ಆಘಾತ 

ಗುವಾಹಟಿ : ಬಾಂಗ್ಲಾದೇಶ ವಿರುದ್ಧ ಆಡಿರುವ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಸೋತಿರುವ ಶ್ರೀಲಂಕಾ ತಂಡದ ವಿಕೆಟ್ ಕೀಪರ್-ಬ್ಯಾಟರ್ ಕುಶಾಲ್ ಪೆರೇರ ಗಾಯಗೊಂಡಿದ್ದಾರೆ. ಅಕ್ಟೋಬರ್ 7ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡುವುದರೊಂದಿಗೆ ವಿಶ್ವಕಪ್ ನಲ್ಲಿ ತನ್ನ ಅಭಿಯಾನ ಆರಂಭಿಸಲಿರುವ ಶ್ರೀಲಂಕಾಕ್ಕೆ ಈ ಬೆಳವಣಿಗೆ ಆಘಾತ ತಂದಿದೆ.

ಶುಕ್ರವಾರ ಬಾಂಗ್ಲಾ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾದ ಪರ ಓಪನರ್ ಪೆರೇರ 24 ಎಸೆತಗಳಲ್ಲಿ 34 ರನ್ ಗಳಿಸಿ ಗಾಯಾಳು ನಿವೃತ್ತಿಯಾಗಿದ್ದರು. ವರ್ಷದ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಲ ಭುಜದಲ್ಲಿ ನೋವು ಕಾಣಿಸಿಕೊಳ್ಳುವ ಮೊದಲು ಎಡಗೈ ಬ್ಯಾಟರ್ ಪೆರೇರ 6 ಬೌಂಡರಿ ಗಳಿಸಿ ಉತ್ತಮ ಟಚ್ ನಲ್ಲಿದ್ದಂತೆ ಕಂಡು ಬಂದರು. ಫಿಜಿಯೋರನ್ನು ಹಲವು ಬಾರಿ ಕರೆಸಿಕೊಂಡ ಪೆರೇರ ನಂತರ ಮೈದಾನದಿಂದ ಹೊರ ನಡೆದರು. ಈಗಾಗಲೇ ಗಾಯದ ಸಮಸ್ಯೆಯಿಂದ ಹಲವು ಪ್ರಮುಖ ಆಟಗಾರರ ಸೇವೆಯಿಂದ ವಂಚಿತರಾಗಿರುವ ಶ್ರೀಲಂಕಾ ಇದೀಗ ಮತ್ತೊಂದು ಹಿನ್ನಡೆ ಅನುಭವಿಸಿದೆ.

ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ ಹಾಗೂ ವೇಗದ ಬೌಲರ್ ದುಷ್ಮಂತ ಚಾಮೀರ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ವಿಫಲರಾಗಿ ವಿಶ್ವಕಪ್ ನ 15 ಸದಸ್ಯರ ತಂಡದಿಂದ ಹೊರಗುಳಿದಿದ್ದರು.

ಪುರುಷರ ಹಾಕಿ: ಪಾಕಿಸ್ತಾನ ವಿರುದ್ದ ಭಾರತಕ್ಕೆ ಭರ್ಜರಿ ಜಯ

ಭಾರತದ ಪುರುಷರ ಹಾಕಿ ತಂಡ ಏಶ್ಯನ್ ಗೇಮ್ಸ್ನ ಎ ಗುಂಪಿನ ಪಂದ್ಯದಲ್ಲಿ ಶನಿವಾರ ಪಾಕಿಸ್ತಾನ ತಂಡವನ್ನು 10-2 ಗೋಲುಗಳ ಅಂತರದಿಂದ ಭರ್ಜರಿ ಅಂತರದಿಂದ ಮಣಿಸಿದೆ. ಭಾರತದ ಪರ ನಾಯಕ ಹರ್ಮನ್ಪ್ರೀತ್ ಸಿಂಗ್ ನಾಲ್ಕು ಗೋಲುಗಳನ್ನು(11ನೇ, 17ನೇ, 33ನೇ, 34ನೇ ನಿಮಿಷ)ಗಳಿಸಿದರೆ, ವರುಣ್ ಕುಮಾರ್(41ನೇ, 54ನೇ ನಿಮಿಷ) ಅವಳಿ ಗೋಲು ಗಳಿಸಿದರು. ಮನ್ದೀಪ್ ಸಿಂಗ್(8ನೇ ನಿಮಿಷ), ಸುಮಿತ್(30ನೇ ನಿಮಿಷ), ಶಂಶೇರ್ ಸಿಂಗ್(46ನೇ ನಿ.) ಹಾಗೂ ಲಲಿತ್ ಕುಮಾರ್ ಉಪಾಧ್ಯಾಯ(49ನೇ ನಿಮಿಷ)ತಲಾ ಒಂದು ಗೋಲು ಗಳಿಸಿದರು. ಪಾಕ್ ಪರ ಮುಹಮ್ಮದ್ ಖಾನ್(38ನೇ ನಿ.) ಹಾಗೂ ಅಬ್ದುಲ್ ರಾಣಾ(45ನೇ ನಿ.)ತಲಾ ಒಂದು ಗೋಲು ಗಳಿಸಿದರು.

ಭಾರತದ ಬ್ಯಾಡ್ಮಿಂಟನ್ ತಂಡ ಫೈನಲ್ ಗೆ 

ಭಾರತದ ಬ್ಯಾಡ್ಮಿಂಟನ್ ಆಟಗಾರರು ಟೀಮ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಗೆ ತಲುಪುವ ಮೂಲಕ ಏಶ್ಯನ್ ಗೇಮ್ಸ್ ನಲ್ಲಿ ಮೊತ್ತ ಮೊದಲ ಚಿನ್ನದ ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಕೆ.ಶ್ರೀಕಾಂತ್ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಭಾರತವು ದಕ್ಷಿಣ ಕೊರಿಯಾ ವಿರುದ್ಧ ಸೆಮಿ ಫೈನಲ್ನಲ್ಲಿ 3-2 ಅಂತರದಿಂದ ಜಯ ಸಾಧಿಸಿ ಫೈನಲ್ ತಲುಪಿದೆ.

ಪುರುಷರ ಹಾಕಿ: ಪಾಕಿಸ್ತಾನ ವಿರುದ್ದ ಭಾರತಕ್ಕೆ ಭರ್ಜರಿ ಜಯ, ಸೆಮಿ ಫೈನಲ್ಗೆ ಲಗ್ಗೆ

ಭಾರತದ ಪುರುಷರ ಹಾಕಿ ತಂಡ ಏಶ್ಯನ್ ಗೇಮ್ಸ್ನ ಎ ಗುಂಪಿನ ಪಂದ್ಯದಲ್ಲಿ ಶನಿವಾರ ಪಾಕಿಸ್ತಾನ ತಂಡವನ್ನು 10-2 ಗೋಲುಗಳ ಭಾರೀ ಅಂತರದಿಂದ ಮಣಿಸಿದೆ. ಪಾಕ್ ವಿರುದ್ಧ ದೊಡ್ಡ ಅಂತರದ ಜಯದ ಮೂಲಕ ಸೆಮಿಫೈನಲ್ಗೆ ತಲುಪಿದೆ.

ಭಾರತದ ಪರ ನಾಯಕ ಹರ್ಮನ್ಪ್ರೀತ್ ಸಿಂಗ್ ನಾಲ್ಕು ಗೋಲುಗಳನ್ನು(11ನೇ, 17ನೇ, 33ನೇ, 34ನೇ ನಿಮಿಷ)ಗಳಿಸಿದರೆ, ವರುಣ್ ಕುಮಾರ್(41ನೇ, 54ನೇ ನಿಮಿಷ) ಅವಳಿ ಗೋಲು ಗಳಿಸಿದರು. ಮನ್ದೀಪ್ ಸಿಂಗ್(8ನೇ ನಿಮಿಷ), ಸುಮಿತ್(30ನೇ ನಿಮಿಷ), ಶಂಶೇರ್ ಸಿಂಗ್(46ನೇ ನಿ.) ಹಾಗೂ ಲಲಿತ್ ಕುಮಾರ್ ಉಪಾಧ್ಯಾಯ(49ನೇ ನಿಮಿಷ)ತಲಾ ಒಂದು ಗೋಲು ಗಳಿಸಿದರು. ಪಾಕ್ ಪರ ಮುಹಮ್ಮದ್ ಖಾನ್(38ನೇ ನಿ.) ಹಾಗೂ ಅಬ್ದುಲ್ ರಾಣಾ(45ನೇ ನಿ.)ತಲಾ ಒಂದು ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಲು ಯತ್ನಿಸಿದರು.

ಉಭಯ ತಂಡಗಳು 180ನೇ ಪಂದ್ಯವನ್ನಾಡಿದ್ದು, 8 ಗೋಲು ಅಂತರ ಈ ವರೆಗಿನ ಭಾರತದ ದೊಡ್ಡ ಗೆಲುವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News