ಇಂಡೋನೇಶ್ಯ ಓಪನ್ | ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಗೆ ಲಗ್ಗೆ

Update: 2024-06-06 17:01 GMT

ಲಕ್ಷ್ಯ ಸೇನ್ | PC : PTI  

ಜಕಾರ್ತ: ಅಮೋಘ ಕೌಶಲ್ಯ ಪ್ರದರ್ಶಿಸಿದ ಲಕ್ಷ್ಯ ಸೇನ್ ಇಂಡೋನೇಶ್ಯ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಪ್ರಾಬಲ್ಯ ಮೆರೆದ ಲಕ್ಷ್ಯ ಸೇನ್ ಅವರು ಜಪಾನ್ನ ಕೆಂಟಾ ನಿಶಿಮೊಟೊರನ್ನು 21-9, 21-15 ಗೇಮ್ ಗಳ ಅಂತರದಿಂದ ಮಣಿಸಿದ್ದಾರೆ.

ಇದೇ ವೇಳೆ ಮಹಿಳೆಯರ ಡಬಲ್ಸ್ ನಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರ ಸವಾಲು ಅಂತ್ಯಗೊಂಡಿದೆ. ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಟ್ರೀಸಾ ಹಾಗೂ ಗಾಯತ್ರಿ ಜಪಾನ್ ನ ಮಯು ಮಟ್ಸುಮೊಟೊ ಹಾಗೂ ವಕಾನ ನಗಹರಾ ವಿರುದ್ಧ ಸೋತಿದ್ದಾರೆ.

ದಕ್ಷಿಣ ಆಫ್ರಿಕಾದ ಹಾ ನಾ ಬಯೆಕ್ ಹಾಗೂ ಸೋ-ಹೀ-ಲೀ ವಿರುದ್ದ ಕಠಿಣ ಹೋರಾಟ ನೀಡಿದ ನಂತರ ತನಿಶಾ ಕ್ರಾಸ್ಟೊ ಹಾಗೂ ಅಶ್ವಿನಿ ಪೊನ್ನಪ್ಪ ಸೋಲುಂಡಿದ್ದಾರೆ. ಈ ಮೂಲಕ ಮಹಿಳೆಯರ ಡಬಲ್ಸ್ನಲ್ಲಿ ಭಾರತದ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News