ಒಲಿಂಪಿಕ್ಸ್ ಇತಿಹಾಸದ ಕುತೂಹಲಕರ ಸಂಗತಿಗಳು

Update: 2024-07-20 15:55 GMT

PC : olympics.com

ಹೊಸದಿಲ್ಲಿ : ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದವರನ್ನೂ ಒಲಿಂಪಿಕ್ಸ್ ಕೈಬೀಸಿ ಕರೆಯುತ್ತದೆ. ಅದು ಒಲಿಂಪಿಕ್ಸ್ ನ ಮಾಯೆ. ಇನ್ನು ಕೆಲವೇ ದಿನಗಳಲ್ಲಿ ಪ್ಯಾರಿಸ್‌ನಲ್ಲಿ ಆರಂಭಗೊಳ್ಳುವ ಒಲಿಂಪಿಕ್ಸ್ ಗಾಗಿ ಜನರು ಬಿಟ್ಟ ಕಣ್ಣುಗಳಿಂದ ಕಾಯುತ್ತಿದ್ದಾರೆ.

ಒಲಿಂಪಿಕ್ಸ್ ಗೆ ದಿನಗಣನೆ ನಡೆಯುತ್ತಿರುವಂತೆಯೇ, ಜಾಗತಿಕ ಕ್ರೀಡಾ ಹಬ್ಬದ ಇತಿಹಾಸಕ್ಕೆ ಸಂಬಂಧಿಸಿದ 24 ವಾಸ್ತವಾಂಶಗಳನ್ನು ಇಲ್ಲಿ ಕೊಡಲಾಗಿದೆ.

1. ಮೊದಲ ಒಲಿಂಪಿಕ್ ಕ್ರೀಡಾಕೂಟ ಗ್ರೀಸ್‌ನ ಒಲಿಂಪಿಯ ನಗರದಲ್ಲಿ ಕ್ರಿಸ್ತಪೂರ್ವ 8ನೇ ಶತಮಾನದಲ್ಲಿ ನಡೆಯಿತು. ಕ್ರೀಡಾಕೂಟವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ 12 ಶತಮಾನಗಳ (1,200 ವರ್ಷ) ಕಾಲ ನಡೆಯಿತು. ಆದರೆ, ಕ್ರಿಸ್ತಶಕ 4ನೇ ಶತಮಾನದಲ್ಲಿ, ಬಹುದೇವತಾರಾಧನೆಯ ಎಲ್ಲಾ ಹಬ್ಬಗಳನ್ನು ಗ್ರೀಸ್ ಚಕ್ರವರ್ತಿ ಪ್ರಥಮ ತಿಯೋಡೋಸಿಯಸ್ ನಿಷೇಧಿಸಿದನು. ಹಾಗಾಗಿ, ಒಲಿಂಪಿಕ್ಸ್ ನಿಂತುಹೋಯಿತು.

2. 1,500 ವರ್ಷಗಳ ಬಳಿಕ, ಒಲಿಂಪಿಕ್ ಪರಂಪರೆಗೆ ಮರುಚಾಲನೆ ನೀಡಲಾಯಿತು. ಮೊದಲ ಆಧುನಿಕ ಒಲಿಂಪಿಕ್ಸ್ 1896ರಲ್ಲಿ ಗ್ರೀಸ್‌ ನಲ್ಲಿ ನಡೆಯಿತು.

3. ಪ್ರಾಚೀನ ಗ್ರೀಸ್‌ನಲ್ಲಿ ಅತ್ಲೀಟ್‌ ಗಳು ಪ್ರಾಯೋಜಕರು, ಸುರಕ್ಷತೆ ಅಥವಾ ಬೆಡಗು (ಫ್ಯಾಶನ್) ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

4. ಪ್ರಾಚೀನ ಕಾಲದಲ್ಲಿ ಒಲಿಂಪಿಕ್ ಕ್ರೀಡಾಕೂಟವು ಐದು ಅಥವಾ ಆರು ತಿಂಗಳುಗಳ ಕಾಲ ನಡೆಯುತ್ತಿತ್ತು.

5. 1900ರ ಬಳಿಕ, ಮಹಿಳೆಯರಿಗೂ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಯಿತು.

6. 1924ರಿಂದ 1992ರವರೆಗೆ, ಚಳಿಗಾಲದ ಮತ್ತು ಬೇಸಿಗೆ ಕಾಲದ ಒಲಿಂಪಿಕ್ಸ್ ಗಳು ಒಂದೇ ವರ್ಷದಲ್ಲಿ ನಡೆಯುತ್ತಿದ್ದವು. ಈಗ ಅವುಗಳು ಪ್ರತ್ಯೇಕವಾಗಿ ಎರಡು ವರ್ಷಗಳ ಅಂತರದಲ್ಲಿ ನಡೆಯುತ್ತವೆ.

7. ಕೇವಲ ನಾಲ್ವರು ಅತ್ಲೀಟ್‌ಗಳು ಚಳಿಗಾಲದ ಮತ್ತು ಬೇಸಿಗೆ ಕಾಲದ ಎರಡೂ ಒಲಿಂಪಿಕ್ಸ್ ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.

8. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ, ಎರಡು ವಾರಗಳ ಕ್ರೀಡಾಕೂಟಕ್ಕಾಗಿ ಒಲಿಂಪಿಕ್ ಗ್ರಾಮದಲ್ಲಿ 1,65,000 ಟವೆಲ್‌ಗಳು ಬಳಕೆಯಾದವು.

9. ಪ್ರತಿ ಒಲಿಂಪಿಕ್ಸ್ ಕ್ರೀಡಾಕೂಟದ ಅಧಿಕೃತ ಭಾಷೆಗಳು ಇಂಗ್ಲಿಷ್ ಮತ್ತು ಫ್ರೆಂಚ್. ಜೊತೆಗೆ ಆತಿಥೇಯ ದೇಶದ ಅಧಿಕೃತ ಭಾಷೆ ಒಲಿಂಪಿಕ್ಸ್ ನ ಮೂರನೇ ಅಧಿಕೃತ ಭಾಷೆಯಾಗುತ್ತದೆ. ಈ ಬಾರಿ ಒಲಿಂಪಿಕ್ಸ್ ಫ್ರಾನ್ಸ್ ನಲ್ಲಿ ನಡೆಯುತ್ತಿರುವುದರಿಂದ ಎರಡೇ ಅಧಿಕೃತ ಭಾಷೆಗಳಿರುತ್ತವೆ.

10. 12 ಚಿತ್ರಗಳಲ್ಲಿ ಟಾರ್ಝನ್ ಆಗಿ ನಟಿಸಿರುವ ಅತ್ಲೀಟ್ ಹಾಗೂ ನಟ ಜಾನಿ ವೈಸ್‌ಮಲ್ಲರ್ 1920ರ ದಶಕದಲ್ಲಿ ಈಜುಗಾರಿಕೆಯಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

11. 1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ, ಇಬ್ಬರು ಜಪಾನೀ ಪೋಲ್‌ವಾಲ್ಟ್ ಪಟುಗಳು ಎರಡನೇ ಸ್ಥಾನದಲ್ಲಿ ಸಮಬಲಗೊಂಡರು. ಮರು ಸ್ಪರ್ಧಿಸುವ ಬದಲು ಅವರು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಅರ್ಧಕ್ಕೆ ತುಂಡರಿಸಿ, ಎರಡು ಭಿನ್ನ ಅರ್ಧ ಪದಕಗಳನ್ನು ಜೋಡಿಸಿದರು. ಅರ್ಧ ಬೆಳ್ಳಿ ಮತ್ತು ಅರ್ಧ ಕಂಚಿನ ಪದಕಗಳನ್ನು ಅವರು ತಮ್ಮಲ್ಲಿ ಹಂಚಿಕೊಂಡರು.

12. ಇಂದಿಗೂ, ಒಲಿಂಪಿಕ್ ದೊಂದಿಯನ್ನು ಗ್ರೀಸ್‌ನ ಹೆರದಲ್ಲಿರುವ ದೇವಾಲಯವೊಂದರಲ್ಲಿ ನಡೆಯುವ ಪ್ರಾಚೀನ ಮಾದರಿಯ ಸಮಾರಂಭದಲ್ಲಿ ಹಳೆಯ ಮಾದರಿಯಲ್ಲಿ ಹೊತ್ತಿಸಲಾಗುತ್ತದೆ. ಗ್ರೀಕ್ ಮಹಿಳಾ ಪುರೋಹಿತರ ದಿರಿಸು ಧರಿಸಿರುವ ನಟಿಯರು ಭೂತ ಕನ್ನಡಿ ಮತ್ತು ಸೂರ್ಯನ ಕಿರಣಗಳ ಮೂಲಕ ದೊಂದಿಯನ್ನು ಹೊತ್ತಿಸುತ್ತಾರೆ.

13. ವಿವಿಧ ಸ್ಥಳಗಳಿಗೆ ಹೋಗುವ ಒಲಿಂಪಿಕ್ ದೊಂದಿ ಮತ್ತು ಒಲಿಂಪಿಕ್ ನಡೆಯುವ ಸ್ಥಳದಲ್ಲಿರುವ ಒಲಿಂಪಿಕ್ ದೀಪ ಪಂದ್ಯಾವಳಿಯುದ್ದಕ್ಕೂ ಉರಿಯಬೇಕು. ಒಂದು ವೇಳೆ ದೀಪ ಆರಿದರೆ, ಅದನ್ನು ಗ್ರೀಸ್‌ನಲ್ಲೇ ಹೊತ್ತಿಸಲಾಗಿರುವ ಮೀಸಲು ದೊಂದಿಯಿಂದಲೇ ಹೊತ್ತಿಸಬೇಕು. ದೀಪವನ್ನು ಇತರ ಯಾವುದೇ ಮೂಲದ ಬೆಂಕಿಯಿಂದ ಉರಿಸುವಂತಿಲ್ಲ.

14. 2012ರ ಲಂಡನ್ ಒಲಿಂಪಿಕ್ಸ್, ಭಾಗವಹಿಸಿದ ಎಲ್ಲಾ ತಂಡಗಳು ಮಹಿಳಾ ಅತ್ಲೀಟ್‌ಗಳನ್ನು ಹೊಂದಿದ್ದ ಮೊದಲ ಒಲಿಂಪಿಕ್ಸ್ ಆಯಿತು.

15. ಒಂದು ಕಾಲದಲ್ಲಿ ಒಲಿಂಪಿಕ್ಸ್ ನ ಭಾಗವಾಗಿದ್ದ ಈ ಕ್ರೀಡೆಗಳು ಇಂದು ಒಲಿಂಪಿಕ್ಸ್ ನಿಂದ ಹೊರಬಿದ್ದಿವೆ: ಸೋಲೊ ಸಿಂಕ್ರೋನೈಸ್ಟ್ ಸ್ವಿಮ್ಮಿಂಗ್, ಟಗ್ ಆಫ್ ವಾರ್, ರೋಪ್ ಕ್ಲೈಂಬಿಂಗ್, ಹಾಟ್ ಏರ್ ಬಲೂನಿಂಗ್, ಡುಯೆಲಿಂಗ್ ಪಿಸ್ತೂಲ್, ಟ್ಯಾಂಡಮ್ ಬೈಸಿಕಲ್, ಸ್ವಿಮ್ಮಿಂಗ್ ಅಬ್ಸ್‌ಟಾಕಲ್ ರೇಸ್ ಮತ್ತು ಪ್ಲಂಜ್ ಫಾರ್ ಡಿಸ್ಟ್ಯಾನ್ಸ್. ಪ್ಯಾರಿಸ್‌ನಲ್ಲಿ ನಡೆದ 1900ರ ಒಲಿಂಪಿಕ್ಸ್ ನಲ್ಲಿ ಜೀವಂತ ಪಾರಿವಾಳಗಳಿಗೆ ಗುಂಡು ಹಾರಿಸುವ ಸ್ಪರ್ಧೆ ನಡೆದಿತ್ತು. ಆದರೆ, ಈ ಸ್ಪರ್ಧೆ ನಡೆದ ಮೊದಲ ಮತ್ತು ಕೊನೆಯ ಒಲಿಂಪಿಕ್ಸ್ ಅದಾಯಿತು.

16. ಒಲಿಂಪಿಕ್ ಕ್ರೀಡಾಕೂಟಗಳ ಆತಿಥ್ಯವನ್ನು ಈವರೆಗೆ 23 ದೇಶಗಳು ವಹಿಸಿವೆ.

17. 2016ರಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್ ದಕ್ಷಿಣ ಅಮೆರಿಕದಲ್ಲಿ ನಡೆದ ಮೊದಲ ಒಲಿಂಪಿಕ್ಸ್ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News