ಐಪಿಎಲ್-2024: ಮೊದಲ 21 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

Update: 2024-02-22 14:26 GMT

Photo: IPL/BCCI

ಹೊಸದಿಲ್ಲಿ: ಬಹು ನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವನ್ನು ಚೆನ್ನೈನಲ್ಲಿ ಎದುರಿಸುವ ಮೂಲಕ ಟೂರ್ನಿಯು ಆರಂಭವಾಗಲಿದೆ.

ಅತ್ಯಂತ ಶ್ರೀಮಂತ ಟ್ವೆಂಟಿ-20 ಕ್ರಿಕೆಟ್ ಲೀಗ್ ನಲ್ಲಿ ಈ ಬಾರಿ ಹಿಂದಿನ ಆವೃತ್ತಿಯ ವಿನ್ನರ್ ಹಾಗೂ ರನ್ನರ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯುವ ಸಂಪ್ರದಾಯವನ್ನು ಕೈಬಿಡಲಾಗಿದೆ.

ಎಂ.ಎಸ್.ಧೋನಿ ನೇತೃತ್ವದ ಸಿಎಸ್ಕೆ ತಂಡ ಚೆನ್ನೈನಲ್ಲಿ ಎಂ.ಎ. ಚಿದಂಬರಂ ಸ್ಟೇಡಿಯಮ್ ನಲ್ಲಿ ತನ್ನ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಮೊದಲ ಪಂದ್ಯವನ್ನು ಆಡಲಿದೆ.

ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಟೂರ್ನಮೆಂಟ್ ನ ಮೊದಲ 17 ದಿನಗಳ ವೇಳಾಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಸಾರ್ವತ್ರಿಕ ಚುನಾವಣೆಯ ದಿನಾಂಕ ಇನ್ನೂ ಅಂತಿಮವಾಗದ ಕಾರಣ ಐಪಿಎಲ್ ನ ಸಂಪೂರ್ಣ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುತ್ತದೆ.

ಮುಂಬರುವ ಲೋಕಸಭೆ ಚುನಾವಣೆಯ ಹೊರತಾಗಿಯೂ ಈ ಬಾರಿಯ ಸಂಪೂರ್ಣ ಐಪಿಎಲ್ ಟೂರ್ನಿಯು ಭಾರತದಲ್ಲೇ ನಡೆಯಲಿದೆ.

2009ರಲ್ಲಿ ಮಾತ್ರ ವಿದೇಶಿ ನೆಲದಲ್ಲಿ ಸಂಪೂರ್ಣ ಐಪಿಎಲ್ ಟೂರ್ನಿ ನಡೆದಿತ್ತು. ಆಗ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿತ್ತು. 2014ರಲ್ಲಿ ಚುನಾವಣೆಯ ಕಾರಣಕ್ಕೆ ಯುಎಇನಲ್ಲಿ ಟೂರ್ನಮೆಂಟ್ ನ ಒಂದು ಭಾಗ ನಡೆದಿತ್ತು. 2019ರಲ್ಲಿ ಲೋಕಸಭೆ ಚುನಾವಣೆ ನಡೆದಿದ್ದರೂ ಭಾರತದಲ್ಲೇ ಐಪಿಎಲ್ ನಡೆಸಲಾಗಿತ್ತು.

ಟ್ವೆಂಟಿ-20 ವಿಶ್ವಕಪ್ ಆರಂಭಕ್ಕೆ ಮೊದಲು ಮೇ ಕೊನೆಯ ವಾರ ಐಪಿಎಲ್ ಫೈನಲ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಭಾರತವು ಜೂನ್ 5ರಂದು ನ್ಯೂಯಾರ್ಕ್ ನಲ್ಲಿ ಐರ್ಲ್ಯಾಂಡ್ ವಿರುದ್ಧ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ. ಟಿ-20 ವಿಶ್ವಕಪ್ ಜೂನ್ 2ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗುತ್ತವೆ.

ಐಪಿಎಲ್ -2024 ವೇಳಾಪಟ್ಟಿ(ಮೊದಲ 21 ಪಂದ್ಯಗಳು)

ತಂಡಗಳು 

 ದಿನಾಂಕ

ಸ್ಥಳ

ಸಮಯ

ಚೆನ್ನೈ-ಆರ್‌ಸಿಬಿ

ಮಾರ್ಚ್ 22

ಚೆನ್ನೈ

ರಾತ್ರಿ 7:30

ಪಂಜಾಬ್-ಡೆಲ್ಲಿ

ಮಾರ್ಚ್ 23

ಮೊಹಾಲಿ

ಮಧ್ಯಾಹ್ನ 3:30

ಕೆಕೆಆರ್-ಹೈದರಾಬಾದ್

ಮಾರ್ಚ್ 23

ಕೋಲ್ಕತಾ

ರಾತ್ರಿ 7:30

ರಾಜಸ್ಥಾನ-ಲಕ್ನೊ

ಮಾರ್ಚ್ 24

ಜೈಪುರ

ಮಧ್ಯಾಹ್ನ 3:30

ಗುಜರಾತ್-ಮುಂಬೈ

ಮಾರ್ಚ್ 24

ಅಹ್ಮದಾಬಾದ್

ರಾತ್ರಿ 7:30

ಆರ್‌ಸಿಬಿ-ಪಂಜಾಬ್

 ಮಾರ್ಚ್ 25

ಬೆಂಗಳೂರು

ರಾತ್ರಿ 7:30

ಸಿಎಸ್ಕೆ-ಗುಜರಾತ್

ಮಾರ್ಚ್ 26

ಚೆನ್ನೈ

ರಾತ್ರಿ 7:30

ಹೈದರಾಬಾದ್-ಮುಂಬೈ

ಮಾರ್ಚ್ 27

ಹೈದರಾಬಾದ್

ರಾತ್ರಿ 7:30

ರಾಜಸ್ಥಾನ-ಡೆಲ್ಲಿ

ಮಾರ್ಚ್ 28

ಜೈಪುರ

ರಾತ್ರಿ 7:30

ಆರ್‌ಸಿಬಿ-ಕೆಕೆಆರ್

ಮಾರ್ಚ್ 29

ಬೆಂಗಳೂರು

ರಾತ್ರಿ 7:30

ಲಕ್ನೊ-ಪಂಜಾಬ್

ಮಾರ್ಚ್ 30

ಲಕ್ನೊ

ರಾತ್ರಿ 7:30

ಗುಜರಾತ್-ಹೈದರಾಬಾದ್ 

ಮಾರ್ಚ್ 31

ಅಹ್ಮದಾಬಾದ್ 

ಮಧ್ಯಾಹ್ನ 3:30

ಡೆಲ್ಲಿ-ಸಿಎಸ್ಕೆ

ಮಾರ್ಚ್ 31

ವಿಶಾಖಪಟ್ಟಣ

ರಾತ್ರಿ 7:30

ಮುಂಬೈ-ರಾಜಸ್ಥಾನ

 ಎಪ್ರಿಲ್ 1

 ಮುಂಬೈ

ರಾತ್ರಿ 7:30

ಆರ್‌ಸಿಬಿ-ಲಕ್ನೊ

 ಎಪ್ರಿಲ್ 2

ಬೆಂಗಳೂರು 

ರಾತ್ರಿ 7:30

ಡೆಲ್ಲಿ-ಕೆಕೆಆರ್

ಎಪ್ರಿಲ್ 3

ವಿಶಾಖಪಟ್ಟಣ

ರಾತ್ರಿ 7:30

ಗುಜರಾತ್-ಪಂಜಾಬ್

ಎಪ್ರಿಲ್ 4

ಅಹ್ಮದಾಬಾದ್

ರಾತ್ರಿ 7:30

ಹೈದರಾಬಾದ್-ಸಿಎಸ್ಕೆ

ಎಪ್ರಿಲ್ 5

ಹೈದರಾಬಾದ್

ರಾತ್ರಿ 7:30

ರಾಜಸ್ಥಾನ-ಆರ್ಸಿಬಿ

ಎಪ್ರಿಲ್ 6

ಜೈಪುರ

ರಾತ್ರಿ 7:30

ಮುಂಬೈ-ಡೆಲ್ಲಿ

 ಎಪ್ರಿಲ್ 7 

ಮುಂಬೈ

ಮಧ್ಯಾಹ್ನ 3:30

ಲಕ್ನೊ-ಗುಜರಾತ್ 

 ಎಪ್ರಿಲ್ 7

ಲಕ್ನೊ

 ರಾತ್ರಿ 7:30





Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News