IPL 2024| ಮುಂಬೈ ಗೆಲುವಿಗೆ 207 ರನ್‌ ಗುರಿ ನೀಡಿದ ಚೆನ್ನೈ

Update: 2024-04-14 16:21 GMT

PC : X \ @IPL 

ಮುಂಬೈ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ನ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ಗೆಲುವಿಗೆ 207 ರನ್‌ ಗಳ ಬೃಹತ್‌ ಗುರಿ ನೀಡಿದೆ. ನಾಯಕ ಋತುರಾಜ್‌ ಗಾಯಕ್ವಾಡ್‌ (69) ಮತ್ತು ಶಿವಂ ದುಭೆ (66) ಆಕರ್ಷಕ ಅರ್ಧ ಶತಕ ಹಾಗೂ ಕೊನೆಯಲ್ಲಿ ಮಹೇಂದ್ರ ಸಿಂಗ್‌ ಧೋನಿಯ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ CSK 200 ರನ್‌ ಗಡಿ ದಾಟಿತು. ಧೋನಿ 4 ಎಸೆತಗಳಲ್ಲಿ 20 ರನ್‌ ಬಾರಿಸಿದರು.

ಮುಂಬೈ ಪರ ನಾಯಕ ಹಾರ್ದಿಕ್‌ ಪಾಂಡ್ಯ 2 ವಿಕೆಟ್‌ ಪಡೆದರೂ 3 ಓವರ್‌ ಗಳಲ್ಲಿ 43 ರನ್‌ ಬಿಟ್ಟುಕೊಟ್ಟು ದುಬಾರಿ ಎನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News