ಐಪಿಎಲ್: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಮುಂಚೂಣಿ ಆಟಗಾರರು

Photo :x/@IPL
ಕೊಲ್ಕತ್ತಾ: ಐಪಿಎಲ್ ಟೂರ್ನಿಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸವಾಲುದಾಯಕ ಪಿಚ್ ನಲ್ಲಿ ಅಜೇಯ 97 ರನ್ ಸಿಡಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ನ ಕ್ವಿಂಟನ್ ಡಿಕಾಕ್, ಆರೆಂಜ್ ಕ್ಯಾಪ್ ರೇಸ್ ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಎರಡು ಪಂದ್ಯಗಳಿಂದ 101.00 ರನ್ ಸರಾಸರಿಯಲ್ಲಿ 153.3 ಸ್ಟ್ರೈಕ್ ರೇಟ್ ನೊಂದಿಗೆ 101 ರನ್ ಗಳನ್ನು ಅವರು ಕಲೆಹಾಕಿದ್ದಾರೆ.
225.53 ಸ್ಟ್ರೈಕ್ ರೇಟ್ ನೊಂದಿಗೆ 106 ರನ್ ಗಳಿಸಿರುವ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಇಶಾನ್ ಕಿಶನ್ ಅಗ್ರಸ್ಥಾನಿಯಾಗಿದ್ದರೆ, ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಧ್ರುವ ಜುರೇಲ್ 163.49 ಸ್ಟ್ರೈಕ್ ರೇಟ್ ನೊಂದಿಗೆ 103 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಒಂದು ಪಂದ್ಯದಲ್ಲಿ 230.95 ಸ್ಟ್ರೈಕ್ ರೇಟ್ ನೊಂದಿಗೆ 97 ರನ್ ಕಲೆ ಹಾಕಿರುವ ಪಂಜಾಬ್ ಕಿಂಗ್ಸ್ನ ಶ್ರೇಯಸ್ ಐಯ್ಯರ್ ಕೂಡಾ ಅಗ್ರ 5ರಲ್ಲಿ ಸ್ಥಾನ ಪಡೆದಿದ್ದಾರೆ.
ಐಪಿಎಲ್ ಪರ್ಪಲ್ ಕ್ಯಾಪ್ ರೇಸ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಎಡಗೈ ಸ್ಪಿನ್ನರ್ ನೂರ್ ಅಹ್ಮದ್, ಚೊಚ್ಚಲ ಪಂದ್ಯದಲ್ಲೇ 4.50 ಸರಾಸರಿ ಮತ್ತು 4.5 ಎಕಾನಮಿ ರೇಟ್ ನಲ್ಲಿ ನಾಲ್ಕು ವಿಕೆಟ್ ಪಡೆದು ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಅದೇ ತಂಡದ ಖಲೀಲ್ ಅಹ್ಮದ್ ಮತ್ತು ಆರ್ ಸಿಬಿಯ ಕೃನಾಲ್ ಪಾಂಡ್ಯ ಮೂರು ವಿಕೆಟ್ ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರ ಸರಾಸರಿ 9.66 ಹಾಗೂ ಎಕಾನಮಿ ರೇಟ್ 7.25 ಆಗಿದೆ.
ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದು ಅಗ್ರ-5ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಎಕಾನಮಿ ರೇಟ್ 7.5 ಇದ್ದು, 17 ರನ್ ಗಳಿಗೆ 2 ವಿಕೆಟ್ ಪಡೆದಿರುವುದು ಇವರ ಅತ್ಯುತ್ತಮ ಪ್ರದರ್ಶನ. ಒಂದು ಪಂದ್ಯದಲ್ಲಿ ಸರಾಸರಿ 10 ಹಾಗೂ 7.54ರ ಎಕಾನಮಿ ದರದಲ್ಲಿ ಮೂರು ವಿಕೆಟ್ ಕಬಳಿಸಿರುವ ಗುಜರಾತ್ ಟೈಟಾನ್ಸ್ ನ ಸಾಯಿ ಕಿಶೋರ್ ಅಗ್ರ-5ರ ಪಟ್ಟಿಯ ಮತ್ತೊಬ್ಬ ಆಟಗಾರ.