ಐಪಿಎಲ್| ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮ ಬಿಡುಗಡೆ?
ಮುಂಬೈ: ಐಪಿಎಲ್ ತಂಡಗಳಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಕುರಿತು ಬಿಸಿಸಿಐ ಇನ್ನಷ್ಟೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕಿದ್ದರೂ, ಪ್ರತಿ ತಂಡದ ಫ್ರಾಂಚೈಸಿಗಳಿಗೆ ಕೇವಲ 6ಕ್ಕಿಂತ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಕೆಲವು ತಂಡಗಳಿಗೆ 8 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ದೊರೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಒಂದು ವೇಳೆ ಬಿಸಿಸಿಐ ಪ್ರತಿ ತಂಡಕ್ಕೆ 6ಕ್ಕಿಂತ ಹೆಚ್ಚು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ ನೀಡಿದರೆ, ಚೆನ್ನೈ ಸೂಪರ್ ಕಿಂಗ್ಸ್ ನ ಮಹೇಂದ್ರ ಸಿಂಗ್ ಧೋನಿಯವರ ಭವಿಷ್ಯ ಡೋಲಾಯಮಾನವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.
ಈ ನಡುವೆ, ಮುಂಬೈ ಇಂಡಿಯನ್ಸ್ ತಂಡದ ತಾರಾ ಆಟಗಾರ ರೋಹಿತ್ ಶರ್ಮರನ್ನು ತಂಡದಿಂದ ಬಿಡುಗಡೆಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಭಿಷೇಕ್ ನಾಯರ್ ಅವರೊಂದಿಗೆ ರೋಹಿತ್ ಶರ್ಮ ಮಾತನಾಡಿದ್ದಾರೆನ್ನಲಾದ ಧ್ವನಿ ಮುದ್ರಿಕೆಯಲ್ಲಿ, 2024ರ ಐಪಿಎಲ್ ನನ್ನ ಕೊನೆಯ ಋತು ಎಂದು ಹೇಳುತ್ತಿರುವುದನ್ನು ಕೇಳಬಹುದಾಗಿದೆ. ಸದ್ಯ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವುದರಿಂದ ರೋಹಿತ್ ಶರ್ಮ ಮತ್ತೊಂದು ತಂಡವನ್ನು ಹುಡುಕಿಕೊಳ್ಳಬೇಕಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರೋಹಿತ್ ಶರ್ಮರೊಂದಿಗೆ ಲಕ್ನೊ ಸೂಪರ್ ಕಿಂಗ್ಸ್ ತಂಡದ ಕೆ.ಎಲ್.ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಕೋಲ್ಕತ್ತಾ ನೈಟ್ ರೈಡರ್ಸ್ ನ ವೆಂಕಟೇಶ್ ಅಯ್ಯರ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಕೂಡಾ ಕ್ರಮವಾಗಿ ತಮ್ಮ ತಂಡಗಳಿಂದ ಬಿಡುಗಡೆಯಾಗಲಿದ್ದಾರೆ ಎಂಬ ಮಾತುಗಳಿವೆ.