IPL | ವೇಗದ 100 ರನ್ ದಾಖಲಿಸಿದ ಸನ್ ರೈಸರ್ಸ್ ಹೈದರಾಬಾದ್
Update: 2024-04-20 15:03 GMT
ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಜಗತ್ತಿನ ಎಲ್ಲಾ ಟಿ20 ಪಂದ್ಯಗಳಲ್ಲಿ ವೇಗದ 100 ರನ್ ದಾಖಲಿಸಿದ ಸಾಧನೆ ಮಾಡಿದೆ.
ಸ್ಪೋಟಕ ಬ್ಯಾಟರ್ ಗಳಿರುವ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ತನ್ನ ತವರು ಅಂಗಳದಲ್ಲಿ ಬ್ಯಾಟಿಂಗ್ ಗೆ ಆಹ್ವಾನಿಸಿದ ಡೆಲ್ಲಿ ಕ್ಯಾಪಿಟಲ್ ತಂಡವು, ತನ್ನ ಬೌಲರ್ ಗಳ ಬೆವರಿಳಿಸುತ್ತಿದೆ. ಸ್ಪೋಟಕ ಬ್ಯಾಟಿಂಗ್ ಮಾಡಿದ ಟ್ರಾವೆಸ್ ಹೆಡ್ ಹೈದರಾಬಾದ್ ತಂಡವು ವೇಗವಾಗಿ ರನ್ ಗಳಿಸಲು ನೆರವಾದರು.
ಡೆಲ್ಲಿ ಕ್ಯಾಪಿಟಲ್ ಪರವಾಗಿ ಕುಲ್ ದೀಪ್ ಯಾದವ್ ಮೂರು ವಿಕೆಟ್ ಪಡೆದು, ಹೈದರಾಬಾದ್ ತಂಡದ ರನ್ ಗಳಿಕೆಗೆ ಕೊಂಚ ಕಡಿವಾಣ ಹಾಕಿದರು.