ಏಶ್ಯಕಪ್‌ನ ಗ್ರೂಪ್ ಹಂತದಲ್ಲಿ ಇಶಾನ್ ಕಿಶನ್ ಭಾರತದ ವಿಕೆಟ್‌ಕೀಪರ್
Update: 2023-09-01 15:32 GMT
ಹೊಸದಿಲ್ಲಿ, ಸೆ.1: ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಏಶ್ಯಕಪ್‌ನ ಆರಂಭಿಕ ಹಂತದಲ್ಲಿ ಇಶಾನ್ ಕಿಶನ್ ಅವರು ವಿಕೆಟ್‌ಕೀಪರ್-ಮಧ್ಯಮ ಸರದಿಯ ಬ್ಯಾಟರ್ ಆಗಿ ಕಾಣಿಕೊಳೃಲಿದ್ದಾರೆ.
ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿಯೇ ಉಳಿದಿದ್ದು, ಮೀಸಲು ಆಟಗಾರನಾಗಿ ತಂಡದೊಂದಿಗೆ ತೆರಳಿದ್ದ ಸಂಜು ಸ್ಯಾಮ್ಸನ್ ವಿಕೆಟ್‌ಕೀಪರ್ ಆಗಬಹುದು ಎಂಬ ನಿರೀಕ್ಷೆ ಇತ್ತು.
ಕ್ಯಾಂಡಿಗೆ ಬುಧವಾರ ಆಗಮಿಸಿದ ನಂತರ ಭಾರತದ ಟೀಮ್ ಮ್ಯಾನೇಜ್‌ಮೆಂಟ್ ವಿವರವಾಗಿ ಈ ವಿಚಾರದ ಕುರಿತು ಚರ್ಚಿಸಿದ್ದು, ಇಶಾನ್‌ರನ್ನು ರಾಹುಲ್ ಸ್ಥಾನದಲ್ಲಿ ಪಾಕಿಸ್ತಾನ ವಿರುದ್ಧ ಏಶ್ಯಕಪ್ ಪಂದ್ಯದಲ್ಲಿ ಆಡಿಸಲು ನಿರ್ಧರಿಸಲಾಗಿದೆ.