ಬಾರ್ಡರ್-ಗಾವಸ್ಕರ್ ಟ್ರೋಫಿ ಪ್ರದಾನ ಮಾಡಲು ಗಾವಸ್ಕರ್ ಗೆ ಆಹ್ವಾನವಿಲ್ಲ: ಅಸಮಾಧಾನ ವ್ಯಕ್ತಪಡಿಸಿದ ಹಿರಿಯ ಆಟಗಾರ

Update: 2025-01-05 12:22 GMT

 ಗಾವಸ್ಕರ್ | PC : PTI

ಸಿಡ್ನಿ: ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಒಂದು ದಶಕದ ನಂತರ ಆಸ್ಟ್ರೇಲಿಯ ತಂಡ ಕೈವಶ ಮಾಡಿಕೊಂಡಿದ್ದು, ಇಲ್ಲಿ ನಡೆದ ಐದನೆ ಮತ್ತು ಕೊನೆಯ ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಆದರೆ, ಈ ಸರಣಿಗೆ ಬಾರ್ಡರ್-ಗಾವಸ್ಕರ್ ಟ್ರೋಫಿ ಎಂದು ಹೆಸರಿಟ್ಟಿದ್ದರೂ, ಕ್ರೀಡಾಂಗಣದಲ್ಲೇ ಇದ್ದ ಗಾವಸ್ಕರ್ ಅವರನ್ನು ಪ್ರಶಸ್ತಿ ಪ್ರದಾನ ಮಾಡಲು ಕರೆಯದಿರುವುದು ವಿವಾದಕ್ಕೆ ಗುರಿಯಾಗಿದೆ. ಈ ಕುರಿತು ಗಾವಸ್ಕರ್ ಕೂಡಾ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಸರಣಿಯನ್ನು 3-1ರ ಅಂತರದಲ್ಲಿ ಜಯಿಸಿದ ಆಸ್ಟ್ರೇಲಿಯ ತಂಡಕ್ಕೆ ಆಸ್ಟ್ರೇಲಿಯ ತಂಡದ ಮಾಜಿ ಆಟಗಾರ ಅಲನ್ ಬಾರ್ಡರ್ ಟ್ರೋಫಿ ಪ್ರದಾನ ಮಾಡಿದರು. ಆದರೆ, ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲೇ ಇದ್ದ ಗಾವಸ್ಕರ್ ಅವರನ್ನು ಟ್ರೋಫಿ ಪ್ರದಾನಕ್ಕೆ ಆಹ್ವಾನಿಸದೆ ನಿರ್ಲಕ್ಷಿಸಲಾಯಿತು. ಈ ಕುರಿತು ಅಸಮಾಧಾನ ಹೊರ ಹಾಕಿರುವ ಗಾವಸ್ಕರ್, “ನಾನು ಭಾರತೀಯನಾಗಿರುವುದರಿಂದ, ಸರಣಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯ ತಂಡಕ್ಕೆ ಟ್ರೋಫಿಯನ್ನು ನನ್ನ ಉತ್ತಮ ಸ್ನೇಹಿತ ಬಾರ್ಡರ್ ರೊಂದಿಗೆ ಪ್ರದಾನ ಮಾಡುವುದನ್ನು ಇಷ್ಟಪಡುತ್ತಿದ್ದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ಕ್ರೀಡಾಂಗಣದಲ್ಲೇ ಇದ್ದುರಿಂದ ಪ್ರಶಸ್ತಿ ಪ್ರದಾನ ಮಾಡುವುದನ್ನು ಇಷ್ಟಪಡುತ್ತಿದ್ದೆ. ಇಷ್ಟಕ್ಕೂ ಇದು ಬಾರ್ಡರ್-ಗಾವಸ್ಕರ್ ಟ್ರೋಫಿಯಾಗಿದ್ದು, ಭಾರತ-ಆಸ್ಟ್ರೇಲಿಯ ನಡುವಿನ ಸರಣಿಯಲ್ಲ” ಎಂದು ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೋಡ್ ಸ್ಪೋರ್ಟ್ಸ್ ವರದಿ ಮಾಡಿದೆ.

1996-97ನೇ ಸಾಲಿನಿಂದ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಬಾರ್ಡರ್-ಗಾವಸ್ಕರ್ ಟ್ರೋಫಿ ನಡೆಯುತ್ತಾ ಬರುತ್ತಿದೆ. ಅಂದಿನಿಂದ ಎರಡೂ ತಂಡಗಳ ನಡುವೆ ತುರುಸಿನ ಪ್ರತಿಸ್ಪರ್ಧೆ ಏರ್ಪಟ್ಟಿದ್ದು, ಮುಖ್ಯವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ತಾರಕಕ್ಕೇರಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News