ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದ ಕನ್ನಡಿಗ ದೇವದತ್ ಪಡಿಕ್ಕಲ್

Update: 2024-03-07 18:02 GMT

 ದೇವದತ್ತ ಪಡಿಕ್ಕಲ್ | Photo; X/@SunilJoshi_Spin

ಧರ್ಮಶಾಲಾ : ಕರ್ನಾಟಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಡುವ ಅಪೂರ್ವ ಅವಕಾಶ ಪಡೆದರು. ಪಡಿಕ್ಕಲ್ 100ನೇ ಟೆಸ್ಟ್ ಪಂದ್ಯವನ್ನಾಡಿದ ಆರ್.ಅಶ್ವಿನ್ ಅವರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದರು.

2021ರಲ್ಲಿ ಕ್ರಿಕೆಟ್ ಪಯಣ ಆರಂಭಿಸಿದ ಪಡಿಕ್ಕಲ್ ಕೋವಿಡ್-19 ಹಾಗೂ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪರದಾಟ ನಡೆಸಿದ್ದಾರೆ.

ಆ ಎರಡು ವರ್ಷ ಪಡಿಕ್ಕಲ್ ಅವರು ಫಿಟ್ ಹಾಗೂ ಆರೋಗ್ಯವಂತರಾಗಿಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರ ದೇಹದ ತೂಕವನ್ನು ಕೂಡ ಕಳೆದುಕೊಂಡಿದ್ದರು. ಅವರಿಗೆ ಹೊಟ್ಟೆನೋವು ನಿರಂತರವಾಗಿ ಕಾಡುತ್ತಿತ್ತು ಎಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ(ಕೆ ಐಒಸಿ) ಸ್ಥಾಪಕ ಇರ್ಫಾನ್ ಸೇಟ್ ಹೇಳಿದ್ದಾರೆ.

ಪಡಿಕ್ಕಲ್ 2023-24ರ ಋತುವಿನಲ್ಲಿ ಕರ್ನಾಟಕದ ಪರ ಎಲ್ಲ ಮಾದರಿಯ ಕ್ರಿಕೆಟ್‌ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ವಿಜಯ್ ಹಝಾರೆ ಟ್ರೋಫಿಯಲ್ಲಿ ಒಟ್ಟು 465 ರನ್ ಗಳಿಸಿ ಗರಿಷ್ಠ ರನ್ ಸ್ಕೋರರ್ ಆಗಿದ್ದ ಪಡಿಕ್ಕಲ್ ರಣಜಿ ಟೂರ್ನಿಯಲ್ಲೂ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಈ ವರ್ಷದ ರಣಜಿಯಲ್ಲಿ ಕೇವಲ 4 ಪಂದ್ಯಗಳಲ್ಲಿ ಒಟ್ಟು 556 ರನ್ ಗಳಿಸಿದ್ದರು.

ಕೆ.ಎಲ್.ರಾಹುಲ್ ಫಿಟ್ನೆಸ್ ಟೆಸ್ಟ್ನಲ್ಲಿ ಅನುತ್ತೀರ್ಣರಾದಾಗ ಭಾರತಕ್ಕೆ ಬದಲಿ ಆಟಗಾರನ ಅಗತ್ಯ ಉಂಟಾಯಿತು. ರಾಹುಲ್ ದ್ರಾವಿಡ್ ಹಾಗೂ ಅಜಿತ್ ಅಗರ್ಕರ್ ಈ ಬಗ್ಗೆ ಚರ್ಚೆ ನಡೆಸಿದರು. ಚೆನ್ನೈ ಇನಿಂಗ್ಸ್ ನಂತರ ದೇವದತ್ ಅವರ ಪ್ರದರ್ಶನದಿಂದ ಪ್ರಭಾವಿತರಾಗಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News