ಅತಿ ಹೆಚ್ಚು ಏಕದಿನ ಕ್ಯಾಚ್‌ಗಳನ್ನು ಹಿಡಿದ ಭಾರತೀಯನಾಗಿ ಕೊಹ್ಲಿ ದಾಖಲೆ

ವಿರಾಟ್ ಕೊಹ್ಲಿ | PC : PTI
ದುಬೈ: ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ, ಕ್ಯಾಚ್‌ಗಳ ವಿಭಾಗದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿ ರವಿವಾರ ಹೊರಹೊಮ್ಮಿದ್ದಾರೆ. ದುಬೈಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅವರು ಈ ದಾಖಲೆ ನಿರ್ಮಿಸಿದ್ದಾರೆ.
ಕೊಹ್ಲಿ 157ನೇ ಏಕದಿನ ಕ್ಯಾಚ್‌ಗಳನ್ನು ಹಿಡಿದು 156 ಕ್ಯಾಚ್‌ಗಳನ್ನು ಹಿಡಿದ ಮುಹಮ್ಮದ್ ಅಝರುದ್ದೀನ್‌ರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಇಂದಿನ ಪಂದ್ಯಕ್ಕೆ ಮುನ್ನ ಈ ದಾಖಲೆಯನ್ನು ನಿರ್ಮಿಸಲು ಕೊಹ್ಲಿಗೆ ಒಂದು ಕ್ಯಾಚ್‌ನ ಅಗತ್ಯವಿತ್ತು. ಕುಲದೀಪ್ ಯಾದವ್‌ರ ಎಸೆತದಲ್ಲಿ ಪಾಕಿಸ್ತಾನದ ನಸೀಮ್ ಶಾ ಬಾರಿಸಿದ ಹೊಡೆತವನ್ನು ಕ್ಯಾಚ್ ಹಿಡಿಯುವುದರೊಂದಿಗೆ ಕೊಹ್ಲಿ ಈ ದಾಖಲೆಯನ್ನು ಸ್ಥಾಪಿಸಿದರು. ಬಳಿಕ ಅವರು ಅದೇ ಇನಿಂಗ್ಸ್‌ನಲ್ಲಿ ಇನ್ನೊಂದು ಕ್ಯಾಚ್ ಹಿಡಿದರು.
ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಏಕದಿನ ಕ್ಯಾಚ್‌ಗಳನ್ನು ಪಡೆದವರ ಪಟ್ಟಿಯಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಮಹೇಲ ಜಯವರ್ದನೆ (218) ಇದ್ದರೆ, ಎರಡನೇ ಸ್ಥಾನವನ್ನು ಆಸ್ಟ್ರೇಲಿಯದ ರಿಕಿ ಪಾಂಟಿಂಗ್ (160) ಪಡೆದಿದ್ದಾರೆ.
ಗರಿಷ್ಠ ಏಕದಿನ ಕ್ಯಾಚ್‌ಗಳನ್ನು ಹಿಡಿದ ಭಾರತೀಯರು ಆಟಗಾರ ಕ್ಯಾಚ್ ಪಂದ್ಯ
1. ವಿರಾಟ್ ಕೊಹ್ಲಿ 158 299
2. ಮುಹಮ್ಮದ್ ಅಝರುದ್ದೀನ್ 156 334
3. ಸಚಿನ್ ತೆಂಡುಲ್ಕರ್ 140 463
4. ರಾಹುಲ್ ದ್ರಾವಿಡ್ 124 344
5. ಸುರೇಶ್ ರೈನಾ 102 226
ಗರಿಷ್ಠ ಏಕದಿನ ಕ್ಯಾಚ್‌ಗಳನ್ನು ಹಿಡಿದವರು
ಆಟಗಾರ ಕ್ಯಾಚ್ ಪಂದ್ಯ
1. ಮಹೇಲಾ ಜಯವರ್ಧನೆ 218 448
2. ರಿಕಿ ಪಾಂಟಿಂಗ್ 160 375
3. ವಿರಾಟ್ ಕೊಹ್ಲಿ 158 299
4. ಮುಹಮ್ಮದ್ ಅಝರುದ್ದೀನ್ 156 334
5. ರಾಸ್ ಟೇಲರ್ 142 236