ಕೊಹ್ಲಿ, ರಾಹುಲ್ ಅರ್ಧ ಶತಕಗಳ ಜೊತೆಯಾಟ, ನೂರರ ಗಡಿ ದಾಟಿದ ಭಾರತ
ಚೆನ್ನೈ : ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ನ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 200 ರನ್ ಗಳ ಬೆನ್ನತ್ತಿದ ಭಾರತ ನೂರರ ಗಡಿ ದಾಟಿದೆ.
29.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ಭಾರತ ಬ್ಯಾಟಿಂಗ್ ಗೆ ಬಂದ ಮೊದಲ ಎರಡು ಓವರ್ ಗಳಲ್ಲಿ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಇದುವರೆಗಿನ ವಿಶ್ವಕಪ್ ಪಂದ್ಯ ಗಳಲ್ಲಿ ಪ್ರೇಕ್ಷಕರ ಕೊರತೆ ಹೆಚ್ಚಿತ್ತು. ಆದರೆ ಚೆನ್ನೈ ನ ಚೆಪಾಕ್ ಸ್ಟೇಡಿಯಂ ತುಂಬಿದ್ದರೂ ಭಾರತ ತಂಡದ ಪ್ರಮುಖ ಬ್ಯಾಟರ್ ಗಳು ಶೂನ್ಯ ಸುತ್ತಿದಾಗ ಅಭಿಮಾನಿಗಳು ಸಪ್ಪೆ ಮೊರೆ ಹಾಕಿಕೊಂಡು ಕೂತಿದ್ದರು. ಭಾರತದ ರಕ್ಷಣಾತ್ಮಕ ಆಟ ಗೆಲುವಿಗೆ ಗುರಿಯೆಡೆಗೆ ಸಾಗತೊಡಗಿದಾಗ, ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿದೆ.
ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಅವರ ರಕ್ಷಣಾತ್ಮಕ ಆಟ ಮೊದಲ ಪಂದ್ಯ ದ ಶುಭಾರಂಭದ ಮುನ್ಸೂಚನೆ ನೀಡುತ್ತಿದೆ. 75 ಎಸೆತ ಎದುರಿಸಿದ ವಿರಾಟ್ ಕೊಹ್ಲಿಅರ್ಧ ಶತಕ ದಾಟುತ್ತಿದಂತೆ ಬ್ಯಾಟ್ ಬೀಸತೊಡಗಿದ್ದಾರೆ. ಕೊಹ್ಲಿಗೆ 100 ರನ್ ಗಳ ಜೊತೆಯಾಟಕ್ಕೆ ಆಸರೆಯಾದ ಕೆ ಎಲ್ ರಾಹುಲ್ 78 ಎಸೆತಗಳಲ್ಲಿ 52 ರನ್ ಗಳಿಸಿದ್ದಾರೆ.
ಬೌಲಿಂಗ್ ಪಿಚ್ ನಲ್ಲಿ ಆರಂಭದಲ್ಲಿ ಪ್ರಾಬಲ್ಯ ಮೆರೆದ ಆಸ್ಟ್ರೇಲಿಯಾ ಬೌಲರ್ ಗಳು ಕೊಹ್ಲಿ – ಕೆ ಎಲ್ ರಾಹುಲ್ ಅವರ ರಕ್ಷಣಾತ್ಮಕ ಜೊತೆಯಾಟ ಮುರಿಯಲು ಬೆವರು ಸುರಿಸುತ್ತಿದ್ದಾರೆ. 29.1 ಓವರ್ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ಕೊಹ್ಲಿ 60 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.