ಅಭ್ಯಾಸದ ವೇಳೆ ಕೊಹ್ಲಿಗೆ ಮೊಣಕಾಲು ಸಮಸ್ಯೆ: ಅಭಿಮಾನಿಗಳಲ್ಲಿ ಆತಂಕ

Update: 2024-12-04 04:02 GMT

 ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ | PC : PTI 

ಅಡಿಲೇಡ್: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಮಂಗಳವಾರ ನಡೆದ ಭಾರತ ತಂಡದ ನೆಟ್ ಪ್ರಾಕ್ಟೀಸ್ ಹಲವು ಕುತೂಹಲಗಳಿಗೆ ಸಾಕ್ಷಿಯಾಯಿತು. ನಾಯಕ ರೋಹಿತ್ ಶರ್ಮಾ ಎರಡು ಪಾಳಿಯಲ್ಲಿ ಆಡಿ ಗಮನ ಸೆಳೆದರು. ರೋಹಿತ್ ಶರ್ಮಾ ಅವರು ಕೆಳ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬ ವದಂತಿಗಳಿಗೆ ಇದು ಪುಷ್ಟಿ ನೀಡಿದೆ. ಯಶಸ್ವಿ ಜೈಸ್ವಾಲ್- ಕೆ.ಎಲ್.ರಾಹುಲ್ ಜೋಡಿ ಭಾರತದ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.

ಅಭ್ಯಾಸ ಸ್ಥಳದಲ್ಲಿ ನಾಲ್ಕು ನೆಟ್ಗಳಲ್ಲಿ ಭಾರತ ತಂಡ ಅಭ್ಯಾಸ ಮಾಡಿದ್ದು, ಪಿಂಕ್ ಕೂಕಬ್ರಾ ಎದುರಿಸುವಲ್ಲಿ ಭಾರತದ ನಾಯಕ ಹೆಚ್ಚಿನ ದೃಢತೆ ಪ್ರದರ್ಶಿಸಿದರು. ಒಂದು ನೆಟ್ನಲ್ಲಿ ಜೈಸ್ವಾಲ್ ಹಾಗೂ ರಾಹುಲ್, ಇನ್ನೊಂದರಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಅಭ್ಯಾಸ ನಡೆಸಿದರು. ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಹಾಗೂ ಕೊನೆಯ ನೆಟ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಕಠಿಣ ಅಭ್ಯಾಸ ನಡೆಸಿದರು.

ಭಾರತದ ಬ್ಯಾಟಿಂಗ್ ಸರದಿ ಒಂದನೇ ಕ್ರಮಾಂಕದ ಆಟಗಾರರಿಂದ ಎಂಟರವರೆಗೂ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ.

ಅಭ್ಯಾಸದ ವೇಳೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೊಣಗಾಲಿಗೆ ಬ್ಯಾಂಡೇಜ್ ಧರಿಸಿದ್ದು, ಹಲವು ಮಂದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಯಿತು. ಡಿಸೆಂಬರ್ 6ರಿಂದ ಆರಂಭವಾಗುವ ಅಡಿಲೇಡ್ ಟೆಸ್ಟ್ಗೆ ಮುನ್ನ ನಡೆದ ಅಭ್ಯಾಸದಲ್ಲಿ ಕೊಹ್ಲಿ ಮೊಣಕಾಸು ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡರು. ಇದರಿಂದ ಅಭಿಮಾನಿಗಳು ಆತಂಕಿತರಾದರು. ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೊಹ್ಲಿ ಶತಕ ದಾಖಲಿಸಿದ್ದು, ಭಾರತ ಈ ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸಿತ್ತು.



Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News