IPL 2024| ಆರ್‌ಸಿಬಿ ವಿರುದ್ಧ ಕೆಕೆಆರ್ ಗೆ 7 ವಿಕೆಟ್ ಗಳ ಭರ್ಜರಿ ಗೆಲುವು
Update: 2024-03-29 17:30 GMT
ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡವು 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ವಿರಾಟ್ ಕೊಹ್ಲಿಯ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ನೀಡಿದ್ದ 182 ರನ್‌ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಕೋಲ್ಕತಾ ತಂಡವು 16.5 ಓವರ್ ನಲ್ಲಿಯೇ ನಿಗಧಿತ ಗುರಿ ತಲುಪುವ ಮೂಲಕ ಏಕಪಕ್ಷೀಯವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿತು.
ಕೆಕೆಆರ್ ಪರ ಆರಂಭಿಕ ಫಿಲಿಪ್ ಸಾಲ್ಟ್ 30, ಸುನಿಲ್ ನರೈನ್ 47, ವೆಂಕಟೇಶ್ ಐಯ್ಯರ್ 50, ಶ್ರೇಯಸ್ ಐಯ್ಯರ್ 39 ಹಾಗೂ ರಿಂಕು ಸಿಂಗ್ 5 ಬಾರಿಸಿದರು.
ಆರ್‌ಸಿಬಿ ಪರ ಯಶ್ ದಯಾಲ್, ಮಯಾಂಕ್ ದಗಾರ್, ವೈಶಾಕ್ ತಲಾ ಒಂದು ವಿಕೆಟ್ ಪಡೆದರು.