ಟೈಮ್ಸ್ ಮ್ಯಾಗಝಿನ್‌ನ 2023ರ ವರ್ಷದ ಕ್ರೀಡಾಪಟುವಾಗಿ ಲಿಯೊನೆಲ್ ಮೆಸ್ಸಿ ಆಯ್ಕೆ

Update: 2023-12-06 14:51 GMT

ಲಿಯೊನೆಲ್ ಮೆಸ್ಸಿ | Photo: PTI 

ಹೊಸದಿಲ್ಲಿ: ಅರ್ಜೆಂಟೀನದ ನಾಯಕ ಲಿಯೊನೆಲ್ ಮೆಸ್ಸಿ ಅವರು ಟೈಮ್ಸ್ ನಿಯತಕಾಲಿಕದ 2023ರ ವರ್ಷದ ಕ್ರೀಡಾಪಟುವಾಗಿ ಆಯ್ಕೆಯಾಗಿದ್ದಾರೆ.

ಮೆಸ್ಸಿ ಅವರು 8ನೇ ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದು ಇಂಟರ್ ಮಿಯಾಮಿ ಕ್ಲಬ್‌ಗೆ ತೆರಳುವ ಮೂಲಕ ಕ್ರೀಡೆಯ ಬಗ್ಗೆ ಅಮೆರಿಕದಲ್ಲಿ ಜಾಗೃತಿ ಮೂಡಿಸಿದ್ದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಸೋಲಿಸಿತ್ತು. ಅರ್ಜೆಂಟೀನ 36 ವರ್ಷಗಳ ನಂತರ ಮೊದಲ ವಿಶ್ವಕಪ್ ಗೆಲ್ಲುವಲ್ಲಿ ಮೆಸ್ಸಿ ಪ್ರಮುಖ ಭೂಮಿಕೆ ನಿಭಾಯಿಸಿದ್ದರು.

36ರ ವಯಸ್ಸಿನ ಮೆಸ್ಸಿ ತನ್ನ ಮಾಜಿ ತಂಡವಾದ ಬಾರ್ಸಿಲೋನಾ ಹಾಗೂ ಸೌದಿಯ ಅಲ್-ಹಿಲಾಲ್‌ನೊಂದಿಗೆ ನಂಟು ಹೊಂದಿದ್ದರು. ಆದರೆ, ಈ ಎರಡು ಫುಟ್ಬಾಲ್ ಕ್ಲಬ್‌ಗಳು ನೀಡಿರುವ ಆಫರ್‌ಗಳನ್ನು ತಿರಸ್ಕರಿಸಿದ ಮೆಸ್ಸಿ ಈ ವರ್ಷದ ಆರಂಭದಲ್ಲಿ ಪ್ಯಾರಿಸ್ ಸೈಂಟ್ ಜರ್ಮೈನ್‌ನತ್ತ ಒಲವು ತೋರಿದ್ದರು. ಡೇವಿಡ್‌ಬೆಕ್‌ಹ್ಯಾಮ್ ಮಾಲಕತ್ವದ ಅಮೆರಿಕದ ಇಂಟರ್ ಮಿಯಾಮಿಯೊಂದಿಗೆ ಜುಲೈನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಮಿಯಾಮಿಯೊಂದಿಗೆ ಸೇರ್ಪಡೆಯಾದ ನಂತರ ಲೀಗ್ ಕಪ್ ಗೆಲ್ಲಲು ನೇತೃತ್ವವಹಿಸಿದರು. 7 ಪಂದ್ಯಗಳಲ್ಲಿ 10 ಗೋಲುಗಳನ್ನು ಗಳಿಸಿದರು.

ಅಮೆರಿಕಕ್ಕೆ ಆಗಮಿಸಿದ್ದ ಅರ್ಜೆಂಟೀನದ ಮೆಸ್ಸಿ ಸಂಚಲನ ಮೂಡಿಸಿದ್ದು, ಇಂಟರ್ ಮಿಯಾಮಿ ಪಂದ್ಯದ ಟಿಕೆಟ್‌ಗಳ ದರ ಗಗನಕ್ಕೆ ಏರಿದ್ದು ಫುಟ್ಬಾಲ್ ಅಭಿಮಾನಿಗಳು ಪಂದ್ಯದ ದಿನಾಂಕವನ್ನು ಹುಡುಕಾಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News