ಎಂಟನೇ ಬಾರಿ ಪ್ರತಿಷ್ಠಿತ ಬ್ಯಾಲನ್ ಡಿʼಒರ್ ಪ್ರಶಸ್ತಿಗೆ ಭಾಜನರಾದ ಲಿಯೊನೆಲ್ ಮೆಸ್ಸಿ

Update: 2023-10-31 11:23 GMT

Photo credit: X/@ani_digital

ಪ್ಯಾರಿಸ್: ಅರ್ಜೆಂಟೀನದ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ಸೋಮವಾರ ಪ್ಯಾರಿಸ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 8ನೇ ಬಾರಿ ಪ್ರತಿಷ್ಠಿತ ಬ್ಯಾಲನ್ ಡಿʼಒರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸ್ಪೇನ್‌ನ ವಿಶ್ವಕಪ್ ಚಾಂಪಿಯನ್ ಐಟಾನಾ ಬೊನ್ಮಟಿ ಅವರು ಮಹಿಳಾ ವಿಭಾಗದಲ್ಲಿ ಬ್ಯಾಲನ್ ಡಿʼಒರ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಕಳೆದ ವರ್ಷ ಖತರ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಅರ್ಜೆಂಟೀನ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೆಸ್ಸಿ ಇದೀಗ ಪ್ರಮುಖ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 7 ಗೋಲುಗಳನ್ನು ಗಳಿಸಿದ್ದ ಮೆಸ್ಸಿ ಏಕಾಂಗಿಯಾಗಿ ಅರ್ಜೆಂಟೀನಕ್ಕೆ ವಿಶ್ವಕಪ್ ತಂದುಕೊಟ್ಟಿದ್ದರು. ಮೆಸ್ಸಿ ಅವರು ನಾರ್ವೆಯ ಎರ್ಲಿಂಗ್ ಹಾಲ್ಯಾಂಡ್ ಹಾಗೂ ಫ್ರಾನ್ಸ್‌ನ ಕಿಲಿಯನ್ ಎಂಬಾಪೆಯವರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಪ್ರಶಸ್ತಿ ತನ್ನದಾಗಿಸಿಕೊಂಡರು.

36ರ ಹರೆಯದ ಮೆಸ್ಸಿ 2009ರಲ್ಲಿ ಮೊದಲ ಬಾರಿ ಬ್ಯಾಲನ್ ಡಿʼಒರ್ ಪ್ರಶಸ್ತಿ ಜಯಿಸಿದ್ದರು. ಇದೀಗ ಒಟ್ಟು 8 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ದೀರ್ಘಕಾಲದ ಎದುರಾಳಿ ಕ್ರಿಸ್ಟಿಯಾನೊ ರೊನಾಲ್ಡೊಗಿಂತ ಮೂರು ಪ್ರಶಸ್ತಿ ಹೆಚ್ಚು ಗೆದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News