ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ; ಕಂಚು ಗೆದ್ದು ದಾಖಲೆ ಬರೆದ ಮನು ಭಾಕರ್

Update: 2024-07-28 12:36 GMT

ಮನು ಭಾಕರ್ (Photo: PTI) 

ಪ್ಯಾರಿಸ್: ಶೂಟರ್ ಮನು ಭಾಕರ್ ಒಲಿಂಪಿಕ್ಸ್ ನ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರವಿವಾರ ಕಂಚಿನ ಪದಕ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮೊದಲ ಪದಕ ಗೆದ್ದಿದೆ. 

ಕೇವಲ 0.1 ಪಾಯಿಂಟ್‌ಗಳ ಅಂತರದಿಂದ ಭಾಕರ್ ಗೆ ಬೆಳ್ಳಿ ಪದಕ ಕೈತಪ್ಪಿದೆ. ರಿಪಬ್ಲಿಕ್‌ ಆಫ್‌ ಕೊರಿಯಾದ ಓ ಯೆ ಜಿನ್‌ ಅವರು 243.2 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿದ್ದು, ದಕ್ಷಿಣ ಕೊರಿಯಾದ ಕಿಮ್ ಯೆಜಿ ಬೆಳ್ಳಿ ಪದಕ ಗೆದ್ದಿದ್ದಾರೆ.

22ರ ಹರೆಯದ ಮನು ಭಾಕರ್ ಶೂಟಿಂಗ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News