ವಿಶ್ವಕಪ್ ಫೈನಲ್ ಕುರಿತು ಮಾರ್ಷ್ ನುಡಿದ ಭವಿಷ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹೊಸದಿಲ್ಲಿ, ನ.17: ಭಾರತ ತಂಡ ರವಿವಾರ ಅಹ್ಮದಾಬಾದ್ನಲ್ಲಿ ನಡೆಯವ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲು ಸಜ್ಜಾಗಿರುವಂತೆ ಈ ವರ್ಷಾರಂಭದಲ್ಲಿ ಐಪಿಎಲ್ ಟೂರ್ನಿಯ ವೇಳೆ ವಿಶ್ವಕಪ್ ಫೈನಲ್ ಪಂದ್ಯದ ಕುರಿತಂತೆ ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಷ್ ನುಡಿದಿರುವ ಭವಿಷ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2 ಬಾರಿಯ ಚಾಂಪಿಯನ್ ಭಾರತ ತವರು ನೆಲದಲ್ಲಿ 3ನೇ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಆಸ್ಟ್ರೇಲಿಯವು 6ನೇ ಪ್ರಶಸ್ತಿಯ ಕನಸು ಕಾಣುತ್ತಿದೆ.
ಮೇ ತಿಂಗಳಲ್ಲಿ ಮಾರ್ಷ್ ಅವರು ತನ್ನ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ನ ಪೋಡ್ಕಾಸ್ಟ್ ಕಾರ್ಯಕ್ರಮದಲ್ಲಿ 2023ರ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದ ಕುರಿತಂತೆ ಭವಿಷ್ಯ ನುಡಿದಿದ್ದರು.
ವಿಶ್ವಕಪ್ನ ಕುರಿತು ಮಾರ್ಷ್ರಲ್ಲಿ ಕೇಳಿದಾಗ, ಆಸ್ಟ್ರೇಲಿಯ ಅಜೇಯವಾಗಿರುತ್ತದೆ. ಭಾರತವನ್ನು ಮಣಿಸುತ್ತದೆ. ಫೈನಲ್ನಲ್ಲಿ ಆಸ್ಟ್ರೇಲಿಯ 2 ವಿಕೆಟ್ಗೆ 450 ರನ್ ಗಳಿಸುತ್ತದೆ, ಭಾರತವು 65 ರನ್ಗೆ ಆಲೌಟ್ ಆಗುತ್ತದೆ ಎಂದು ಹೇಳಿದ್ದರು.
ಭಾರತವು ಈ ಹಿಂದೆ 2003ರಲ್ಲಿ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಿತ್ತು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯವು 125 ರನ್ನಿಂದ ಭರ್ಜರಿ ಜಯ ಸಾಧಿಸಿತ್ತು.
ಈ ಬಾರಿ ಭಾರತವು ಚೆನ್ನೈನಲ್ಲಿ ಆಸೀಸ್ ವಿರುದ್ಧ 6 ವಿಕೆಟ್ ಜಯ ಸೇರಿದಂತೆ ತಾನಾಡಿದ ಎಲ್ಲ 10 ಪಂದ್ಯಗಳನ್ನು ಜಯಿಸಿದೆ. ಪ್ಯಾಟ್ ಕಮಿನ್ಸ್ ಬಳಗವು 9 ಗ್ರೂಪ್ ಪಂದ್ಯಗಳ ಪೈಕಿ 7ರಲ್ಲಿ ಜಯ ಸಾಧಿಸಿದೆ. ಸೆಮಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 3 ವಿಕೆಟ್ನಿಂದ ಸೋಲಿಸಿ 8ನೇ ಬಾರಿ ವಿಶ್ವಕಪ್ ಫೈನಲ್ಗೆ ತಲುಪಿದೆ.
— Out Of Context Cricket (@GemsOfCricket) November 17, 2023