ಮಾಕ್ಸ್ ʼವೆಲ್‌ʼ ಆಟ: ನೆದರ್ಲ್ಯಾಂಡ್ಸ್‌ ಗೆ ಕಠಿಣ ಗುರಿ

Update: 2023-10-25 12:59 GMT

PHOTO : cricketworldcup.com

ಹೊಸದಿಲ್ಲಿ:ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ಗ್ಲೇನ್ ಮಾಕ್ಸ್ ವೆಲ್ ಹಾಗೂ ಡೇವಿಡ್ ವಾರ್ನರ್ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ನೆದರ್ಲ್ಯಾಂಡ್ಸ್ ಗೆಲುವಿಗೆ 400 ರನ್ ಗುರಿ ನೀಡಿದೆ.

ನೆದರ್ಲ್ಯಾಂಡ್ಸ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡರು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಪೈಕಿ 2 ಪಂದ್ಯ ಡಿಫೆಂಡ್ ಮಾಡಿದ ತಂಡಗಳೇ ಗೆಲುವು ಸಾಧಿಸಿದ್ದವು. ಇತ್ತ ಬ್ಯಾಟಿಂಗ್ ಗೆ ಬಂದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಮಿಷೆಲ್ ಮಾರ್ಷ್ ತಂಡ 28 ಗಳಿಸುರುವಾಗಲೇ ಕೇವಲ 9 ರನ್ ಗೆ ವಾನ್ ಬೀಕ್ ಬೌಲಿಂಗ್ ನಲ್ಲಿಔಟ್ ಆದರು. ಬಳಿಕ ಜೊತೆಯಾದ ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ ಜೋಡಿ ರಕ್ಷಣಾತ್ಮಕ ಬ್ಯಾಟ್ ಬೀಸಿದರು.

ಆರಂಭದಲ್ಲಿ ನಿಧಾನಗತಿ ರನ್ ಕಳೆಹಾಕಿದ ಈರ್ವರು ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸ್ಟೀವನ್ ಸ್ಮಿತ್ 9 ಬೌಂಡರಿ 1 ಸಿಕ್ಸರ್ ನೆರವಿನಿಂದ 71 ರನ್ ಗಳಿಸಿ ಅರ್ಧಶತಕ ಬಾರಿಸಿ ಆರ್ಯನ್ ದತ್ ಗೆ ವಿಕೆಟ್ ನೀಡಿ ನಿರ್ಗಮಿಸಿದರೆ, ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ 93 ಎಸೆತಗಳಲ್ಲಿ 11 ಬೌಂಡರಿ 3 ಸಿಕ್ಸರ್ ಸಹಿತ 104 ರನ್ ಸಿಡಿಸುವ ಮೂಲಕ ತಮ್ಮ 22 ನೇ ಶತಕ ಪೂರೈಸಿ ಸಂಭ್ರಮಿಸಿದರು. ಮಾರ್ನಸ್ ಲಬುಶೇನ್ 7 ಬೌಂಡರಿ 2 ಸಿಕ್ಸರ್ ಸಹಿತ 62 ರ್ ಗಳಿಸಿ ಬಾಸ್‌ ಡೆ ಲೀಡೆ ವಿಕೆಟ್ ಒಪ್ಪಿಸುದರೊಂದಿಗೆ ತಮ್ಮ ಉಪಯುಕ್ತ ಇನ್ನಿಂಗ್ಸ್ ಕೊನೆಗೊಳಿಸಿದರು. ಜೋಸ್ ಇಂಗ್ಲಿಸ್ 8 ರನ್ ಗೆ ಗಳಿಸಿದರು.

PHOTO : X/@CricketAus

 ಕ್ಯಾಮರೋನ್ ಗ್ರೀನ್ 8 ರನ್ ಗೆ ಸೈಬ್ರಾಂಡ್ ನೇರ ಎಸೆತ ವಿಕೆಟ್ ಗೆ ಬಡಿದ ಪರಿಣಾಮ ರನೌಟ್ ಗೆ ಬಲಿಯಾದರು. ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೇನ್ ಮಾಕ್ಸ್ ವೆಲ್ ದಾಖಲೆಯ ಶತಕದ ಮೂಲಕ ತಂಡವನ್ನು380 ರ ಗಡಿ ದಾಟುವಂತೆ ಮಾಡಿದರು. ಕೇವಲ 44 ಎಸೆತ ಎದುರಿಸಿದ ಗ್ಲೇನ್ ಮಾಕ್ಸ್ ವೆಲ್ 9 ಬೌಂಡರಿ 8 ಸಿಕ್ಸರ್ 106 ರನ್ ದಾಖಲಿಸುವ ಮೂಲಕ ಅತೀ ವೇಗದ ಶತಕ ಸಿಡಿಸಿದ ದಾಖಲೆ ತಮ್ಮ ಹೆಸರಿಗೆ ಮಾಡಿಕೊಂಡರು.

ನೆದರ್ಲ್ಯಾಂಡ್ಸ್ ಪರ ಲೊಗನ್ ವಾನ್ ಬೀಕ್ 4 ವಿಕೆಟ್ ಪಡೆದರೆ ಬಾಸ್ ಡೆ ಲೀಡೆ 2 ಹಾಗೂ ಆರ್ಯನ್ ದತ್ತ್ ಒಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News