ಐತಿಹಾಸಿಕ ಬಾಕ್ಸಿಂಗ್ ಪಂದ್ಯದಲ್ಲಿ ಟೈಸನ್ ರನ್ನು ಸೋಲಿಸಿದ ಜೇಕ್ ಪೌಲ್
ಹೊಸದಿಲ್ಲಿ : ಹೊಸದಿಲ್ಲಿ : ಡಲ್ಲಾಸ್ ಕೌಬಾಯ್ಸ್‌ನ AT&T ಸ್ಟೇಡಿಯಂನಲ್ಲಿ ನಡೆದ ಐತಿಹಾಸಿಕ ಬಾಕ್ಸಿಂಗ್ ಪಂದ್ಯದಲ್ಲಿ ಮೈಕ್ ಟೈಸನ್ ಅವರನ್ನು ಜೇಕ್ ಪೌಲ್ ಸೋಲಿಸಿದ್ದಾರೆ.
4 ನೇ ಸುತ್ತಿನ ನಂತರ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಯೂಟ್ಯೂಬ್ ಸೆನ್ಸೇಷನ್ ಜೇಕ್ ಪೌಲ್ ಅವರು ಪಂದ್ಯವನ್ನು ತನ್ನತ್ತ ತಿರುಗಿಸಿದರು.
ಮೈಕ್ ಟೈಸನ್ ವಿರುದ್ಧದ ದೊಡ್ಡ ಹೋರಾಟದಲ್ಲಿ ಜೇಕ್ ಪೌಲ್ 79-73 ಅಂಕಗಳಿಂದ ಗೆಲುವು ಸಾಧಿಸಿದ್ದಾರೆ. 2024 ರ ಅತಿದೊಡ್ಡ ಬಾಕ್ಸಿಂಗ್ ಪಂದ್ಯವೆಂದು ಬಿಂಬಿಸಲಾಗಿದ್ದ ಈ ಪಂದ್ಯವನ್ನು ನೋಡಲು ಜಗತ್ತಿನಾದ್ಯಂತ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು.
ಶನಿವಾರದಂದು ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ AT&T ಸ್ಟೇಡಿಯಂ ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಯಿತು. 58 ವರ್ಷದ ಮೈಕ್ ಟೈಸನ್ ಅವರ ಪಂಚ್ ಗಳು ಲಯ ಕಳೆದುಕೊಂಡ ಕಾರಣ ಯೂಟ್ಯೂಬರ್-ಬಾಕ್ಸರ್ ಜೇಕ್ ಪಾಲ್ ಸ್ಪಷ್ಟವಾಗಿ ಮುನ್ನಡೆ ಸಾಧಿಸಿದರು.
ವಯಸ್ಸಿನ ಪರಿಣಾಮವು ಟೈಸನ್‌ರ ಆಟದಲ್ಲಿ ಸ್ಪಷ್ಟವಾಗಿ ಕಾಣಿಸಿತು. ಅವರು ಮೊದಲ ಎರಡು ಸುತ್ತುಗಳಲ್ಲಿ ಕಷ್ಟಪಟ್ಟು ಪಂಚ್ ಮಾಡಿದರು. ಅದನ್ನು ಶೀಘ್ರವೇ ಅರಿತುಕೊಂಡ ಜೇಕ್ ಎಂಟು ಸುತ್ತಿನ ಪಂದ್ಯದಲ್ಲಿ ಮುನ್ನಡೆ ಸಾಧಿಸಿದರು.
ವಿಶ್ವದ ಖ್ಯಾತ ಬಾಕ್ಸರ್ ಮೈಕ್ ಟೈಸನ್ 19 ವರ್ಷಗಳ ಬಳಿಕ ಬಾಕ್ಸಿಂಗ್ ಅಖಾಡಕ್ಕೆ ಮರಳಿದ್ದರು.