ಶ್ರೇಷ್ಠ-ಕನಿಷ್ಠ ನಂಬಿಕೆಯ ಹೊಸ ಆಯಾಮವನ್ನು ತೆರೆದಿಟ್ಟ ಟ್ರೋಫಿಯೊಂದಿಗಿನ ಮಿಚೆಲ್‌ ಮಾರ್ಷ್‌ ಚಿತ್ರ

Update: 2023-11-21 13:27 GMT

Photo: X/@mufaddal_vohra

ಹೊಸದಿಲ್ಲಿ: ವಿಶ್ವಕಪ್‌ ಫೈನಲ್‌ ಗೆದ್ದ ಆಸ್ಟ್ರೇಲಿಯಾವು ಆರನೇ ಬಾರಿಗೆ ವಿಶ್ವಕಪ್‌ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಆಸಿಸ್‌ನ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಅವರು ಟ್ರೋಫಿ ಮೇಲೆ ಕಾಲಿಟ್ಟು ಕೂತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಹಲವರು ಮಿಚೆಲ್‌ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದು, ಆಸ್ಟ್ರೇಲಿಯಾದವರು ಹಿಂದಿನಿಂದಲೂ ತಮ್ಮ ದುರಹಂಕಾರ ಪ್ರದರ್ಶಿಸುತ್ತಾ ಬರುತ್ತಿದ್ದಾರೆ. ಮಿಚೆಲ್‌ನ ಈ ನಡೆಯು ಅಹಂಕಾರದ್ದು ಎಂದು ಟೀಕಿಸಿದ್ದಾರೆ.

ಆದರೆ, ಟ್ರೋಫಿ ಮೇಲೆ ಕಾಲಿಡುವ ಬಗ್ಗೆ ಭಾರತೀಯರು ಬಹಳ ಭಾವುಕರಾಗಬೇಕಿಲ್ಲ ಎಂದು ಹಲವರು ಅಭಿಪ್ರಾಯಿಸಿದ್ದಾರೆ.

ಕಾಲು ಕನಿಷ್ಠ, ತಲೆ ಶ್ರೇಷ್ಠ ಎಂಬುದು ಭಾರತೀಯರ ಅಜ್ಞಾನವಾಗಿದ್ದು, ದೇಹದಲ್ಲಿ ಶ್ರೇಷ್ಠ-ಕನಿಷ್ಠ ಎಂಬ ಭಾಗಗಳಿಲ್ಲ. ಆದರೆ, ತಲೆಯಿಂದ ಹುಟ್ಟಿದ ಬ್ರಾಹ್ಮಣರು ಶ್ರೇಷ್ಠರು, ಕಾಲಿನಿಂದ ಹುಟ್ಟಿದ ಶೂದ್ರರು ಕೀಳು ಎಂಬ ಭಾವನೆಯನ್ನು ಶತಮಾನಗಳಿಂದ ಬೆಳೆಸುತ್ತಾ ಬರಲಾಗಿದೆ. ಅದೇ ನಂಬಿಕೆಯ ಮೇಲೆ ಟ್ರೋಫಿ ಮೇಲೆ ಕಾಲಿಟ್ಟಿರುವುದು ಅಗೌರವ ಎಂದು ನೋಡಲಾಗುತ್ತಿದೆ ಎಂದು ಹಲವರು ಬ್ರಾಹ್ಮಣ್ಯದ ಮೇಲೆ ಟೀಕಾಸ್ತ್ರ ಹೂಡಿದ್ದಾರೆ.

ಸಿದ್ದಾರ್ಥ ಎಂಬವರು ಈ ಕುರಿತು ಟ್ವೀಟ್‌ ಮಾಡಿದ್ದು, “ಮಿಚೆಲ್ ಮಾರ್ಷ್ ಅವರ ಫೋಟೋದಿಂದ ಭಾರತದಲ್ಲಿ ಸೃಷ್ಟಿಯಾದ ದೊಡ್ಡ ಕೋಲಾಹಲವು ಬ್ರಾಹ್ಮಣ ಧರ್ಮದಿಂದ ಹುಟ್ಟಿಕೊಂಡಿದೆ, ಅಲ್ಲಿ ಬ್ರಾಹ್ಮಣನು ಭಗವಂತನ ತಲೆಯಿಂದ ಮತ್ತು ಶೂದ್ರ ಅವನ ಪಾದಗಳಿಂದ ಹುಟ್ಟಿದನು ಎಂದು ನಂಬಲಾಗುತ್ತದೆ. ನೀವು ಈ ಬ್ರಾಹ್ಮಣ ಕನ್ನಡಕವನ್ನು ತೊಡೆದುಹಾಕಿದ ನಂತರ ನಿಮ್ಮ ಪಾದಗಳಿಂದ ಏನನ್ನಾದರೂ ಸ್ಪರ್ಶಿಸುವುದು ‘ಅಶುದ್ಧʼ ಅಥವಾ ಅಗೌರವವಲ್ಲ ಎನ್ನುವುದು ಅರ್ಥವಾಗುತ್ತದೆ” ಎಂದು ಬರೆದಿದ್ದಾರೆ.

ಜಾಗತಿಕ ಕ್ರೀಡಾಪಟುಗಳು ಟ್ರೋಫಿಗಳ ಮೇಲೆ ಕಾಲಿಟ್ಟು ಕೂತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಸಿದ್ಧಾರ್ಥ, “ಬೇರೆಡೆ ಕ್ರೀಡಾಪಟುಗಳು ತಮ್ಮ ಟ್ರೋಫಿಗಳನ್ನು ಪಾದಗಳಿಂದ ಸ್ಪರ್ಶಿಸುವ ಕೆಲವು ಫೋಟೋಗಳು ಇಲ್ಲಿವೆ. ಅವರು ಬ್ರಾಹ್ಮಣ ಸಮಾಜಗಳಲ್ಲಿ ವಾಸಿಸುವುದಿಲ್ಲವಾದ್ದರಿಂದ, ಅವರು ಟ್ರೋಫಿಗಳನ್ನು (ಅಥವಾ ಪುಸ್ತಕಗಳನ್ನು) ಪಾದಗಳಿಂದ ಮುಟ್ಟುವಲ್ಲಿ ಅಗೌರವವನ್ನು ಗುರುತಿಸುವುದಿಲ್ಲ. ಅಥವಾ ಇನ್ನೊಬ್ಬ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸುವುದರಲ್ಲಿ ಗೌರವವನ್ನು ಕಾಣುವುದಿಲ್ಲ” ಎಂದು ಬರೆದಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News