ಇಡೀ ಐಪಿಎಲ್‌ನಲ್ಲಿ ಎಂ.ಎಸ್.ಧೋನಿ ಉತ್ತಮ ಫಿನಿಶರ್ : ಡಿವಿಲಿಯರ್ಸ್

Update: 2024-04-23 16:59 GMT

ಎಂ.ಎಸ್.ಧೋನಿ ,  ಡಿವಿಲಿಯರ್ಸ್ | PC : PTI 

ಹೊಸದಿಲ್ಲಿ: ಪ್ರಸಕ್ತ ಐಪಿಎಲ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ. ಎಸ್. ಧೋನಿ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಸಾಬೀತುಪಡಿಸುತ್ತಿದ್ದಾರೆ. ಸಿಎಸ್‌ಕೆ ಪರ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವ ಧೋನಿ ಅವರು ಫಿನಿಶರ್ ಪಾತ್ರವನ್ನು ಸಶಕ್ತವಾಗಿ ನಿಭಾಯಿಸುತ್ತಿದ್ದಾರೆ.

42ರ ಹರೆಯದ ಧೋನಿಯ ಬ್ಯಾಟಿಂಗ್ ಸಾಹಸವನ್ನು ಶ್ಲಾಘಿಸಿರುವ ಎಬಿ ಡಿವಿಲಿಯರ್ಸ್, ಕೆಲವು ಸಲಹೆ ನೀಡಿದ್ದಾರೆ.

ಧೋನಿಯ ಫಾರ್ಮ್‌ನ್ನು ಪರಿಗಣಿಸಿದರೆ ಅವರು ಮುಂಬರುವ ಪಂದ್ಯಗಳಲ್ಲಿ ಬ್ಯಾಟಿಂಗ್ ಸರದಿಯಲ್ಲಿ ಭಡ್ತಿ ಪಡೆಯಬೇಕು. ಇದರಿಂದ ಸಿಎಸ್‌ಕೆಗೆ ಲಾಭವಿದೆ ಎಂದಿದ್ದಾರೆ.

ಇಂದಿನ ದಿನಗಳಲ್ಲಿ ಧೋನಿ ಹೆಚ್ಚು ಕ್ರಿಕೆಟ್ ಆಡುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲೆ. ಐಪಿಎಲ್‌ಗೆ ತಯಾರಿ ನಡೆಸಿ, ಆಡುತ್ತಾರಷ್ಟೇ. ಅವರು ಫಾರ್ಮ್‌ನಲ್ಲಿಲ್ಲದ ಕಾರಣ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರಬಹುದು. ಯುವ ಆಟಗಾರರು ಅಗ್ರ ಸರದಿಯಲ್ಲಿ ಆಡುತ್ತಿದ್ದಾರೆ. 9 ಎಸೆತಗಳಲ್ಲಿ ಔಟಾಗದೆ 28 ರನ್, 4 ಎಸೆತಗಳಲ್ಲಿ 20 ರನ್ ಗಳಿಸಿರುವ ಧೋನಿ, 5ನೇ ಇಲ್ಲವೇ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ದೀರ್ಘ ಸಮಯದಿಂದ ಸಿಎಸ್‌ಕೆ ಪರ ಆಡುತ್ತಿರುವ ಧೋನಿ ಆ ತಂಡದ ಓರ್ವ ಸ್ಫೋಟಕ ಶೈಲಿಯ ಆಟಗಾರನಾಗಿ ಉಳಿದುಕೊಂಡಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News