ಮೈದಾನಕ್ಕೆ ನುಗ್ಗಿ ಧೋನಿ ಕಾಲಿಗೆ ಬಿದ್ದ ಅಭಿಮಾನಿ
ಹೊಸದಿಲ್ಲಿ: ಸುಧೀರ್ಘ ವೃತ್ತಿಜೀವನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿ ಹಲವು ಸಮಯ ಕಳೆದರೂ ಸಾಕಷ್ಟು ಅಭಿಮಾನಿಗಳ ಸಂಖ್ಯೆಯನ್ನು ಹೊಂದಿದ್ದಾರೆ. ಅವರ ಜನಪ್ರಿಯತೆ ಅಪಾರ ಎನ್ನುವುದಕ್ಕೆ ಪ್ರತಿ ಹಂತದಲ್ಲೂ ಹಲವು ನಿದರ್ಶನಗಳು ಕಂಡುಬರುತ್ತಿವೆ.
ಗುಜರಾತ್‍ನಲ್ಲಿ ಶುಕ್ರವಾರ ನಡೆದ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಧೋನಿ ಅಭಿಮಾನಿಯೊಬ್ಬ ಭದ್ರತಾ ಕೋಟೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ಧೋನಿಯ ಪಾದಕ್ಕೆ ಬಿದ್ದು ನಮಸ್ಕರಿಸಿದ ಘಟನೆ ನಡೆಯಿತು.
ಸಿಎಸ್‍ಕೆ ಪರ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಮೈದಾನಕ್ಕೆ ನುಗ್ಗಿದ ಅಭಿಮಾನಿಯ ಈ ಅತಿರೇಕದ ವರ್ತನೆ ಅಲ್ಪ ವಿಳಂಬಕ್ಕೆ ಕಾರಣವಾಯಿತು. ತಕ್ಷಣವೇ ಭದ್ರತಾ ಸಿಬ್ಬಂದಿ ಆತನನ್ನು ಕರೆದೊಯ್ದರು.
ರಶೀದ್‍ಖಾನ್ ಎಸೆತದಲ್ಲಿ ಸತತ ಎರಡು ಸಿಕ್ಸರ್ ಬಾರಿಸಿದ ಧೋನಿ 11 ಎಸೆತಗಳಲ್ಲಿ 26 ರನ್ ಸಿಡಿಸಿ ಅಜೇಯರಾಗಿ ಉಳಿದರು.
ಈ ಪಂದ್ಯದಲ್ಲಿ 35 ರನ್‍ಗಳ ಗೆಲುವು ಸಾಧಿಸುವ ಮೂಲಕ ಗುಜರಾತ್ ಟೈಟನ್ಸ್ ತಮ್ಮ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿತು. ಸಾಯಿ ಸುದರ್ಶನ್ 51 ಎಸೆತಗಳಲ್ಲಿ 103 ಮತ್ತು ನಾಯಕ ಶುಭಮನ್ ಗಿಲ್ 55 ಎಸೆತಗಳಲ್ಲಿ 104 ರನ್ ಗಳಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್‍ಗಳ ಭರ್ಜರಿ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಡೆರಿಲ್ ಮಿಚೆಲ್ (63) ಮತ್ತು ಮೊಯಿನ್ ಅಲಿ (56) ಅವರ ಉತ್ತಮ ಪ್ರತಿರೋಧದ ನಡುವೆಯೂ ತವರಿನ ಪ್ರೇಕ್ಷಕರ ಎದುರು ಜಿಟಿ ಬೌಲರ್‍ಗಳು ಎದುರಾಳಿಗಳನ್ನು 8 ವಿಕೆಟ್ ನಷ್ಟಕ್ಕೆ 196 ರನ್‍ಗಳಿಗೆ ನಿಯಂತ್ರಿಸಿದರು.
Does Anyone Noticed MS Dhoni Protecting his fans from Guard. How can Someone hate him ❤️ pic.twitter.com/iacLy16RKi
— DIPTI MSDIAN (@Diptiranjan_7) May 11, 2024
The Words can't describe MS Dhoni and his legacy and what he gave to Indian cricket & every fans.❤️
— Tanuj Singh (@ImTanujSingh) May 11, 2024
- He is an emotion. Just stand & admire, bow down to Great Man MS Dhoni. pic.twitter.com/IGXKgHaXlo