ಐಪಿಎಲ್ 1000 ಸಿಕ್ಸರ್ ಮೈಲಿಗಲ್ಲಿನಲ್ಲಿ ಹೊಸ ದಾಖಲೆ

Update: 2024-05-08 17:51 GMT

PC: X 

ಹೊಸದಿಲ್ಲಿ : 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಟಗಾರರು 1000ಕ್ಕೂ ಅಧಿಕ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್‌ಗಳು ಸಿಡಿದಿರುವುದು ಇದು ಮೂರನೇ ಬಾರಿಯಾಗಿದೆ.

ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜಯಂಟ್ಸ್ ನಡುವಿನ ಪಂದ್ಯದಲ್ಲಿ 1000ನೇ ಸಿಕ್ಸರ್ ಸಿಡಿದಿದೆ.

ಐಪಿಎಲ್‌ನ ಈ ಋತುವಿನಲ್ಲಿ ಕೇವಲ 13,079 ಎಸೆತಗಳಲ್ಲಿ 1000 ಸಿಕ್ಸರ್‌ಗಳು ದಾಖಲಾಗಿವೆ. ಇದು ಅತ್ಯಂತ ವೇಗದ 1000 ಸಿಕ್ಸರ್‌ಗಳಾಗಿವೆ. ಈ ಹಿಂದಿನ ದಾಖಲೆಯು 2023 ಮತ್ತು 2022ರ ಋತುಗಳಲ್ಲಿ ದಾಖಲಾಗಿತ್ತು. ಅಂದು ಕ್ರಮವಾಗಿ 1124 ಮತ್ತು 1062 ಸಿಕ್ಸರ್‌ಗಳು ದಾಖಲಾಗಿವೆ.

2023ರಲ್ಲಿ 1000 ಸಿಕ್ಸರ್‌ಗಳು ದಾಖಲಾಗಲು 15,390 ಎಸೆತಗಳು ಮತ್ತು 2022ರಲ್ಲಿ 1,000 ಸಿಕ್ಸರ್‌ಗಳು ದಾಖಲಾಗಲು 16,269 ಎಸೆತಗಳು ಬೇಕಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News