'ಟೈಮ್ಡ್ ಔಟ್' ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಥ್ಯೂಸ್ ರನ್ನು ಕಿಚಾಯಿಸಿದ ನೂಝಿಲ್ಯಾಂಡ್ ಕ್ರಿಕೆಟಿಗರು
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನ ಶ್ರೀಲಂಕಾ ಮತ್ತು ನೂಝಿಲ್ಯಾಂಡ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಟ್ರೆಂಟ್ ಬೌಲ್ಟ್ ಲಂಕಾದ ಮ್ಯಾಥ್ಯೂಸ್ ಬಳಿ ಹೆಲ್ಮೆಟ್ ಪಟ್ಟಿ ನೋಡಿಕೊಳುವಂತೆ ತಮಾಷೆಯ ಸಂಭಾಷಣೆ ನಡೆಸಿದರು.
ಶ್ರೀಲಂಕಾ ಅನುಭವಿ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಬಾಂಗ್ಲಾದೇಶ ವಿರುದ್ಧದ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ವೇಳೆ 'ಟೈಮ್ಡ್ ಔಟ್' ಆದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾದರು. ಆದರೆ ಪಂದ್ಯದ ಬಳಿಕ ಈ ಬಗ್ಗೆ ಮ್ಯಾಥ್ಯೂಸ್ ಬಾಂಗ್ಲಾ ಆಟಗಾರರ ಮೇಲೆ ಆಕೋಶ ವ್ಯಕ್ತಪಡಿಸಿದ್ದರು. ಮ್ಯಾಥ್ಯೂಸ್ ಸಮಯಕ್ಕೆ ಸರಿಯಾಗಿ ಕ್ರೀಸ್ ತಲುಪಿದರು ಆದರೆ ಮುರಿದ ಹೆಲ್ಮೆಟ್ ಪಟ್ಟಿಯಿಂದಾಗಿ, ಅವರು ತಮ್ಮ ಮೊದಲ ಎಸೆತವನ್ನು ಎದುರಿಸಲು ಸಿದ್ಧರಿರಲಿಲ್ಲ. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮನವಿಯ ನಂತರ ಮ್ಯಾಥ್ಯೂಸ್ ಗೆ 'ಟೈಮ್ ಔಟ್' ನೀಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ.
ಇಂದು ಶ್ರೀಲಂಕಾ ಮತ್ತು ನ್ಯೂಝಿಲ್ಯಾಂಡ್ ನಡುವಿನ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದ ಸಂದರ್ಭದಲ್ಲಿ, ಕೇನ್ ವಿಲಿಯಮ್ಸನ್ ಮತ್ತು ಟ್ರೆಂಟ್ ಬೌಲ್ಟ್ ಇಬ್ಬರೂ ಮ್ಯಾಥ್ಯೂಸ್ ಬ್ಯಾಟಿಂಗ್ ಗೆ ಬಂದಾಗ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ಅವರ ಹೆಲ್ಮೆಟ್ ಪಟ್ಟಿಯನ್ನು ಪರೀಕ್ಷಿಸಲು ಹೇಳಿ ಕೀಟಲೆ ಮಾಡಿದರು, ಅದರೆ ಮ್ಯಾಥ್ಯೂಸ್ ಈ ವಿಷಯವನ್ನು ತಮಾಷೆಯ ಭಾಗವಾಗಿ ನೋಡಿದರು.