ಏಕದಿನ ಕ್ರಿಕೆಟ್ | ವೇಗವಾಗಿ 100 ವಿಕೆಟ್ ಪೂರೈಸಿದ ಇಂಗ್ಲೆಂಡ್ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್

Update: 2024-05-30 16:41 GMT

PC : X

ಹೊಸದಿಲ್ಲಿ: ಇಂಗ್ಲೆಂಡ್ ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಏಕದಿನ ಕ್ರಿಕೆಟ್ ಅಂತರರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ 100 ವಿಕೆಟ್ ಗಳನ್ನು ಪೂರೈಸಿದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು.

ಬುಧವಾರ ಪಾಕಿಸ್ತಾನ ವಿರುದ್ದ 178 ರನ್ ನಿಂದ ಗೆದ್ದಿರುವ ಪಂದ್ಯದಲ್ಲಿ ಮೂರು ವಿಕೆಟ್ ಗಳನ್ನು ಪಡೆದಿರುವ ಎಕ್ಲೆಸ್ಟೋನ್ ಈ ಸಾಧನೆ ಮಾಡಿದ್ದಾರೆ.

ಎಲ್ಲ ಮೂರು ಏಕದಿನ ಪಂದ್ಯಗಳಲ್ಲಿ 6 ವಿಕೆಟ್ ಗಳ ಗೊಂಚಲು ಪಡೆದಿರುವ 25ರ ಹರೆಯದ ಎಕ್ಲೆಸ್ಟೋನ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಎಕ್ಲೆಸ್ಟೋನ್ ತಾನಾಡಿದ 63ನೇ ಪಂದ್ಯದಲ್ಲಿ 100 ವಿಕೆಟ್ ಮೈಲಿಗಲ್ಲು ತಲುಪಿದರು. ಈ ಮೂಲಕ 64 ಇನಿಂಗ್ಸ್ಗಳಲ್ಲಿ 100 ವಿಕೆಟ್ಗಳನ್ನು ಉರುಳಿಸಿದ್ದ ಆಸ್ಟ್ರೇಲಿಯದ ವೇಗದ ಬೌಲರ್ ಕ್ಯಾಥ್ರಿನ್ ಫಿಝ್ಪ್ಯಾಟ್ರಿಕ್ ದಾಖಲೆ ಮುರಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News