ಒಲಿಂಪಿಕ್ ಪದಕ ಧರಿಸಿದ್ದಕ್ಕೆ ಟ್ರೋಲ್: ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶೂಟರ್ ಮನು ಭಾಕರ್

Update: 2024-09-25 10:41 GMT

 ಮನು ಭಾಕರ್ | PC ; PTI 

ಹೊಸದಿಲ್ಲಿ: ಶೂಟರ್ ಮನು ಭಾಕರ್, ಪ್ಯಾರಿಸ್ ಒಲಿಂಪಿಕ್ ಪದಕಗಳನ್ನು ಕಾರ್ಯಕ್ರಮವೊಂದರಲ್ಲಿ ಧರಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದು, ಈ ಬಗ್ಗೆ ಅವರು ತೀಕ್ಷ್ಣವಾಗಿಯೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಶೂಟರ್ ಮನು ಭಾಕರ್ ಕಳೆದ ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದರು. ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಅಥ್ಲಿಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಪ್ಯಾರಿಸ್ ಒಲಿಂಪಿಕ್ಸ್ -2024ರಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆ ಮತ್ತು ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.

ಶೂಟರ್ ಮನು ಭಾಕರ್ ಪ್ರಶಸ್ತಿ ಗೆದ್ದು ದೇಶಕ್ಕೆ ಕೀರ್ತಿಯನ್ನು ತಂದರೂ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅವರು ಕೆಲ ಕಾರ್ಯಕ್ರಮಕ್ಕೆ ಪ್ಯಾರಿಸ್ ಒಲಿಂಪಿಕ್ ನಲ್ಲಿ ಗೆದ್ದ ಪದಕಗಳನ್ನು ಕೊಂಡೊಯ್ದಿದ್ದರು, ಇದು ಟ್ರೋಲ್ ಗೆ ಒಳಗಾಗಿತ್ತು. ಈ ಬಗ್ಗೆ ಮನು ಭಾಕರ್ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.

ಹೌದು, ನಾನು ಕೊಂಡೊಯ್ಯುತ್ತೇನೆ, ನಾನೇಕೆ ಕೊಂಡೊಯ್ಯಬಾರದು ಎಂಬ ದಾಟಿಯಲ್ಲಿ ಕಂಚಿನ ಪದಕಗಳೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಕುರಿತ ಆನ್ಲೈನ್ ಕಾಮೆಂಟ್ಗಳ ಬಗ್ಗೆ Times of India ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಕೆಲ ಕಾರ್ಯಕ್ರಮಗಳ ಸಂಘಟಕರ ಕೋರಿಕೆಯ ಮೇರೆಗೆ ಕಾರ್ಯಕ್ರಮಗಳಿಗೆ ತಾನು ಪದಕಗಳನ್ನು ಕೊಂಡೊಯ್ದಿದ್ದೇನೆ. ಕೆಲವರು ಪದಕವನ್ನು ತನ್ನಿ ಎಂದು ಕೇಳುತ್ತಾರೆ. ಯಾರಾದರೂ ಅದನ್ನು ನೋಡಲು ಬಯಸಿದರೆ ನಾನು ಅದನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಮನು ಭಾಕರ್ ಟ್ರೋಲ್ ಮಾಡುವವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News