ಟೆಸ್ಟ್, ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಶಾಕಿಬ್ | ಮೀರ್‌ಪುರದಲ್ಲಿ ಅಂತಿಮ ಟೆಸ್ಟ್ ಆಡುವ ಬಯಕೆ ವ್ಯಕ್ತಪಡಿಸಿದ ಆಲ್‌ರೌಂಡರ್

Update: 2024-09-26 15:42 GMT

 ಶಾಕಿಬ್ ಅಲ್ ಹಸನ್ | PTI 

ಕಾನ್ಪುರ : ಬಾಂಗ್ಲಾದೇಶದ ಮೀರ್‌ಪುರದಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಗೊಳ್ಳುವ ಬಯಕೆಯನ್ನು ಆ ದೇಶದ ಹಿರಿಯ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಗುರುವಾರ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಆ ಪಂದ್ಯ ನಡೆಯದಿದ್ದರೆ, ಭಾರತ ವಿರುದ್ಧದ ಬಾಂಗ್ಲಾದೇಶದ ಎರಡನೇ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಆಗಲಿದೆ ಎಂದು ಅವರು ಹೇಳಿದ್ದಾರೆ. ಅದೂ ಅಲ್ಲದೆ, ನಾನು ಈಗಾಗಲೇ ನನ್ನ ಕೊನೆಯ ಟೆ20 ಪಂದ್ಯವನ್ನು ಆಡಿದ್ದೇನೆ ಎಂಬುದಾಗಿಯೂ ಅವರು ಘೋಷಿಸಿದ್ದಾರೆ.

ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮುನ್ನಾ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಕಿಬ್ ಮಾತನಾಡುತ್ತಿದ್ದರು.

‘‘ನನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಮೀರ್‌ಪುರದಲ್ಲಿ ದಾಡುವ ಇಚ್ಛೆಯನ್ನು ನಾನು ವ್ಯಕ್ತಪಡಿಸಿದ್ದೇನೆ. ಅದು ಸಂಭವಿಸದಿದ್ದರೆ, ಭಾರತದ ವಿರುದ್ಧದ ಎರಡನೇ ಟೆಸ್ಟ್ ನನ್ನ ಕೊನೆಯದು’’ ಎಂದು ಅವರು ತಿಳಿಸಿದರು.

‘‘ನಾನು ನನ್ನ ಕೊನೆಯ ಟಿ20 ಪಂದ್ಯವನ್ನು ಆಡಿದ್ದೇನೆ ಎಂದು ನನಗೆ ಅನಿಸುತ್ತದೆ’’ ಎಂದು ಹೇಳಿದ ಅವರು, ಟಿ20 ಕ್ರಿಕೆಟ್‌ಗೂ ನಿವೃತ್ತಿಯನ್ನು ಘೋಷಿಸಿದ್ದಾರೆ.

ಶಾಕಿಬ್ ಅಲ್ ಹಸನ್ ಈವರೆಗೆ 70 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 38.33ರ ಸರಾಸರಿಯಲ್ಲಿ 4,600 ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ ಐದು ಶತಕಗಳು ಮತ್ತು 31 ಅರ್ಧ ಶತಕಗಳಿವೆ.

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಶಾಕಿಬ್ ಬೌಲಿಂಗ್‌ನಲ್ಲೂ ಯಶಸ್ಸು ಕಂಡಿದ್ದಾರೆ. ಅವರು 242 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 19 ಬಾರಿ ಇನಿಂಗ್ಸ್ ಒಂದರಲ್ಲಿ ಐದು ವಿಕೆಟ್‌ಗಳ ಗೊಂಚಿಲು ಮತ್ತು ಎರಡು ಬಾರಿ 10 ವಿಕೆಟ್‌ಗಳ ಗೊಂಚಿಲು ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News