ವಿನೀಶ್ ಫೋಗಟ್ ಅವರ ಕೂದಲು ಕತ್ತರಿಸಿದರೂ ಅನರ್ಹತೆಯಿಂದ ತಪ್ಪಿಸಲಾಗಲಿಲ್ಲ : ಭಾರತದ ವೈದ್ಯಾಧಿಕಾರಿ ಡಾ. ಪರಿದಿವಾಲಾ

Update: 2024-08-07 13:59 GMT

ಭಾರತದ ಅಥ್ಲೀಟ್ ತಂಡದ ಮುಖ್ಯ ವೈದ್ಯಾಧಿಕಾರಿ(CMO) ಡಾ. ದಿನ್ಶಾ ಪರಿದಿವಾಲಾ |PC :PTI

ಪ್ಯಾರಿಸ್: ಕುಸ್ತಿಯಲ್ಲಿ ಮಹಿಳೆಯರ 50 ಕೆ ಜಿ ವಿಭಾಗದ ಚಿನ್ನದ ಪದಕಕ್ಕಾಗಿನ ಪಂದ್ಯಕ್ಕೆ ಅರ್ಹತೆ ಪಡೆಯಲು ವಿನೀಶ್ ಫೋಗಟ್ ಅವರ ಕೂದಲು ಕತ್ತರಿಸಿದರೂ ಅನರ್ಹತೆಯಿಂದ ತಪ್ಪಿಸಲಾಗಲಿಲ್ಲ ಎಂದು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿರುವ ಭಾರತದ ಅಥ್ಲೀಟ್ ತಂಡದ ಮುಖ್ಯ ವೈದ್ಯಾಧಿಕಾರಿ(CMO) ಡಾ. ದಿನ್ಶಾ ಪರಿದಿವಾಲಾ ಹೇಳಿದ್ದಾರೆ.

ಮಂಗಳವಾರ ಸತತ ಮೂರು ಪಂದ್ಯಗಳಾಡಿ ದಣಿದಿದ್ದ ಫೋಗಟ್ ಬುಧವಾರ ಚಿನ್ನದ ಪದಕ್ಕಾಗಿನ ಫೈನಲ್ ಪಂದ್ಯದಲ್ಲಿ ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಬೇಕಾಗಿತ್ತು. ಅದಕ್ಕಿಂತ ಮುಂಚಿತವಾಗಿ ನಡೆದ ತೂಕ ಮಾಡುವ ಪ್ರಕ್ರಿಯೆಯಲ್ಲಿ ವಿನೇಶ್ ಫೋಗಟ್ ಅವರ ತೂಕ 100.ಗ್ರಾಂ ಹೆಚ್ಚಿದ್ದರಿಂದ ಅವರನ್ನು ಅನರ್ಹೊಳಿಸಲಾಯಿತು.

"...ನಿರ್ಜಲೀಕರಣವನ್ನು ತಡೆಗಟ್ಟಲು ಸ್ವಲ್ಪ ಪ್ರಮಾಣದ ನೀರನ್ನು ನೀಡಬೇಕಾಗಿತ್ತು. ಆ ಬಳಿಕ ಆಕೆಯ ತೂಕವು ಹೆಚ್ಚಾಯಿತು. ತರಬೇತುದಾರರು ವಿನೇಶ್ ರೊಂದಿಗೆ ಯಾವಾಗಲೂ ಬಳಸುತ್ತಿದ್ದ ತೂಕ ಕಡಿತ ಮಾಡುವ ಸಾಮಾನ್ಯ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆ ಮೂಲಕ ತೂಕ ಸಮತೋಲನ ಕಾಪಾಡಿಕೊಳ್ಳುವ ವಿಶ್ವಾಸವಿತ್ತು" ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಹೊರಡಿಸಿದ ಹೇಳಿಕೆಯಲ್ಲಿ ಪರಿದಿವಾಲಾ ತಿಳಿಸಿದ್ದಾರೆ.

"ಆದರೂ ವಿನೇಶ್ ಅವರು ಸ್ಪರ್ಧಿಸಲಿದ್ದ 50 ಕೆಜಿ ತೂಕದ ವಿಭಾಗದ ಸ್ಪರ್ಧೆಗಿಂತ ಹೆಚ್ಚಿನ 100 ಗ್ರಾಂ ತೂಕ ಕಂಡುಬಂತು. ಆದ್ದರಿಂದ ಫೋಗಟ್ ಅನರ್ಹರಾದರು. ತೂಕ ಇಳಿಸಲು ಅವರ ಕೂದಲನ್ನು ಕತ್ತರಿಸುವುದು ಸೇರಿದಂತೆ ಎಲ್ಲಾ ಕಠಿಣ ಕ್ರಮಗಳನ್ನು ಬಳಸಲಾಯಿತು. ಆದರೆ, ವಿನೇಶ್ ಅನುಮತಿಸಿದ 50 ಕೆಜಿ ತೂಕಕ್ಕಿಂತ ಹೆಚ್ಚಿನ ತೂಕದವರಾಗಿ ಕಂಡು ಬಂದರು" ಎಂದು ಅವರು ತಿಳಿಸಿದ್ದಾರೆ.

"ಕುಸ್ತಿಪಟುಗಳು ಸಾಮಾನ್ಯವಾಗಿ ತಮ್ಮ ನೈಸರ್ಗಿಕ ತೂಕಕ್ಕಿಂತ ಕಡಿಮೆ ತೂಕದ ವಿಭಾಗದಲ್ಲಿ ಭಾಗವಹಿಸುತ್ತಾರೆ. ಅವರು ಕಡಿಮೆ ಪ್ರಬಲ ಎದುರಾಳಿಗಳೊಂದಿಗೆ ಹೋರಾಡುವುದರಿಂದ ಇದು ಅವರಿಗೆ ಪ್ರಯೋಜನವನ್ನು ನೀಡುತ್ತದೆ. ಸ್ಪರ್ಧೆಯ ನಂತರ ಕೆಲವೊಮ್ಮೆ ತೂಕ ಹೆಚ್ಚಾಗುವುದೂ ಇರುತ್ತದೆ " ಎಂದು ಡಾ ಪಾರ್ದಿವಾಲಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News