ಒಲಿಂಪಿಕ್ಸ್‌ ಬ್ಯಾಡ್ಮಿಂಟನ್ ಸಿಂಗಲ್ಸ್‌ | ರೋಚಕ ಪಂದ್ಯದಲ್ಲಿ ಗೆದ್ದ ಭಾರತದ ಲಕ್ಷ್ಯ ಸೇನ್

Update: 2024-07-27 15:03 GMT

Photo : x@OlympicKhel

ಪ್ಯಾರಿಸ್ : ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ ನಲ್ಲಿ ಗೆಲುವಿನ ಆರಂಭವನ್ನು ಪಡೆದರು. ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಅವರನ್ನು ಲಕ್ಷ್ಯ ಸೇನ್ ಕೇವಲ 40 ನಿಮಿಷಗಳಲ್ಲಿ 21-8, 22-20 ರಿಂದ ಸೋಲಿಸಿದರು.

ಮೊದಲ ಗೇಮ್ನಲ್ಲಿ ಲಕ್ಷ್ಯ ಸೇನ್ 21-8 ಅಂತರದಲ್ಲಿ ಗೆಲುವು ಸಾಧಿಸಿದರು. ಆದರೆ ಎರಡನೇ ಗೇಮ್ ನಲ್ಲಿ ಒಂದು ಹಂತದಲ್ಲಿ ಕೆವಿನ್ ಕಾರ್ಡನ್ ಅವರು 20-16 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಒಂದು ಹಂತದಲ್ಲಿ ಪಂದ್ಯವು 20-20 ಪಾಯಿಂಟ್ ಗಳಿಂದ ಸಮಬಲ ಸಾಧಿಸಿ ರೋಚಕ ಹಂತ ತಲುಪಿತ್ತು. ತಿರುಗಿ ಬಿದ್ದ ಲಕ್ಷ್ಯ ಸೇನ್ ತನಗಿಂತ ಹಿರಿಯ 37 ವಯಸ್ಸಿನ ಕಾರ್ಡನ್ ವಿರುದ್ಧ 6 ನೇರ ಪಾಯಿಂಟ್ ಗಳಿಂದ ಗೆದ್ದು, ಪಂದ್ಯವನ್ನು ತನ್ನತ್ತ ತಿರುಗಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News