ಪ್ಯಾರಿಸ್ ಒಲಿಂಪಿಕ್ಸ್ | ಭಾರತೀಯ ಸೇನೆಯ 13 ಕ್ರೀಡಾಳುಗಳು ಭಾಗಿ

Update: 2024-07-16 20:53 IST
ಪ್ಯಾರಿಸ್ ಒಲಿಂಪಿಕ್ಸ್ | ಭಾರತೀಯ ಸೇನೆಯ 13 ಕ್ರೀಡಾಳುಗಳು ಭಾಗಿ

Indian Army at the Paris Olympics (X)

  • whatsapp icon

ಹೊಸದಿಲ್ಲಿ : ಮುಂಬರುವ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 13 ಕ್ರೀಡಾಳುಗಳ ಗುಂಪು ಭಾಗವಹಿಸಲಿದೆ. ಈ ಕ್ರೀಡಾಪಟುಗಳು ಏಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಭಾರತೀಯ ಸೇನೆ ಸೋಮವಾರ ಪ್ರಕಟಿಸಿದೆ.

ಈ ಮಾಹಿತಿಯನ್ನು ಸೇನೆಯ ಹೆಚ್ಚುವರಿ ಡೈರೆಕ್ಟರೇಟ್ ಜನರಲ್ ಆಫ್ ಪಬ್ಲಿಕ್ ಇನ್ಫರ್ಮೇಶನ್(ಎಡಿಜಿಪಿಐ)ಉಪೇಂದ್ರ ದ್ವಿವೇದಿ ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿರುವ ಭಾರತೀಯ ಸೇನೆಯ ಕ್ರೀಡಾಪಟುಗಳ ಜೊತೆಗೆ ಎಡಿಜಿಪಿಐ ಉಪೇಂದ್ರ ದ್ವಿವೇದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಅಥ್ಲೀಟ್‌ಗಳಿಗೆ ಶುಭ ಹಾರೈಸಿದ ದ್ವಿವೇದಿ ಅವರು ಕ್ರೀಡಾಪಟುಗಳ ಬದ್ದತೆ ಹಾಗೂ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು. ಅಥ್ಲೀಟ್‌ಗಳ ಸಾಧನೆಗಳು ಭಾರತೀಯ ಸೇನೆ ಹಾಗು ದೇಶಕ್ಕೆ ಅಪಾರವಾದ ಹೆಮ್ಮೆಯ ಮೂಲವಾಗಿದೆ ಎಂದು ಒತ್ತಿ ಹೇಳಿದ್ದಾರೆ.

ನೀರಜ್ ಚೋಪ್ರಾ, ಚೈನ್ ಸಿಂಗ್, ಬಲರಾಜ್ ಪಾನ್ವರ್, ವರುಣ್ ಥೋಮರ್, ಸರ್ವೇಶ್ ಕುಶಾರೆ, ಚಂದ್ರಶೇಖರ್ ದಲಾಲ್, ಶರತ್‌ಲಾಲ್, ಸೋನಮ್ ಭುಟಿಯಾ, ಸುಬೇದಾರ್ ತರುಣ್‌ದೀಪ್ ರಾಯ್, ಧೀರಜ್ ಬೊಮ್ಮದೇವರ ಹಾಗೂ ಎನ್.ಶ್ರೀರಾಮ್ ಬಾಲಾಜಿ ಅವರೊಂದಿಗೆ ದ್ವಿವೇದಿ ವೀಡಿಯೊ ಕಾನ್ಫರೆನ್ಸ್ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News