ಪ್ಯಾರಿಸ್ ಒಲಿಂಪಿಕ್ಸ್ 2024 | ಮಹಿಳೆಯರ 50 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಿಖತ್ ಝರೀನ್
ಪ್ಯಾರಿಸ್: ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಝರೀನ್ ತಮ್ಮ ಪ್ಯಾರಿಸ್ ಒಲಿಂಪಿಕ್ಸ್ ಪಯಣದಲ್ಲಿ ಶುಭಾರಂಭ ಮಾಡಿದ್ದು, ಕಠಿಣ ಸ್ಪರ್ಧೆಯಲ್ಲಿ ಜರ್ಮನಿಯ ಮ್ಯಾಕ್ಸಿ ಕ್ಲೊಯೆಟ್ಝರ್ ಅವರನ್ನು ಮಣಿಸುವ ಮೂಲಕ ಮಹಿಳೆಯರ 50 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಉತ್ತರ ಪ್ಯಾರಿಸ್ ಬಾಕ್ಸಿಂಗ್ ಅಖಾಡದಲ್ಲಿ ಮೊದಲ ಸುತ್ತಿನಲ್ಲಿ ಮೂರು ಕಾರ್ಡ್ ಗಳಿಂದ 28 ವರ್ಷದ ಭಾರತೀಯ ಕುಸ್ತಿಪಟುವು ಹಿನ್ನಡೆ ಅನುಭವಿಸಿದರು. ಆ ಸುತ್ತಿನಲ್ಲಿ ಕ್ಲೊಯೆಟ್ಝರ್ 3-2 ಅಂತರದಲ್ಲಿ ಮುನ್ನಡೆ ಸಾಧಿಸಿದರು.
ಪದಕದ ಪ್ರಬಲ ಸ್ಪರ್ಧಿಯಾದ ಶ್ರೇೆಯಾಂಕ ರಹಿತ ನಿಖತ್ ಝರೀನ್, ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಪಂದ್ಯ ಆರಂಭವಾಗುತ್ತಿದ್ದಂತೆಯೇ ಜರ್ಮನಿಯ ಬಾಕ್ಸರ್ ಆಕ್ರಮಣಕಾರಿ ದಾಳಿಯ ಮೂಲಕ ನಿಖತ್ ಝರೀನ್ ರನ್ನು ಕಂಗೆಡಿಸಿದರು.
ಆದರೆ, ತಮ್ಮ ಎದುರಾಳಿಯನ್ನು ಚತುರತೆಯಿಂದ ಬಾಕ್ಸಿಂಗ್ ಅಖಾಡದ ಮಧ್ಯಭಾಗಕ್ಕೆ ತಳ್ಳುವಲ್ಲಿ ನಿಖತ್ ಝರೀನ್ ಯಶಸ್ವಿಯಾದರು. ಜರ್ಮನಿಯ ಬಾಕ್ಸರ್ ಗೆ ಕೆಲವು ಅತ್ಯುತ್ತಮ ಕಿಕ್ ಗಳನ್ನು ಮಾಡುವ ಮೂಲಕ ನಿಖತ್ ಝರೀನ್ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡರು. ಇಬ್ಬರೂ ಬಾಕ್ಸರ್ ಗಳು ಪರಸ್ಪರರನ್ನು ಗುರಿಯಾಗಿಸಿಕೊಂಡು ಬಲವಾದ ಆಕ್ರಮಣ ನಡೆಸಿದರು.
ತಮ್ಮ ಎತ್ತರದಿಂದ ಜರ್ಮನ್ ಬಾಕ್ಸರ್ ಅನನುಕೂಲ ಎದುರಿಸಿದರೂ, ಕೆಲವು ಉತ್ತಮ ಹೊಡೆತಗಳ ಮೂಲಕ ಮೊದಲ ಸುತ್ತಿನಲ್ಲಿ 3-2 ಅಂತರದಲ್ಲಿ ಮೇಲುಗೈ ಸಾಧಿಸಿದರು.
ಎರಡನೆಯ ಸುತ್ತನ್ನೂ ಇಬ್ಬರೂ ಬಾಕ್ಸರ್ ಗಳು ಬಲವಾದ ಪಂಚ್ ಗಳ ಮೂಲಕ ಪ್ರಾರಂಭಿಸಿದರು. ಆದರೆ, ತಮ್ಮ ಲಯಕ್ಕೆ ಮರಳಿದ ನಿಖತ್ ಝರೀನ್, ಕ್ಲೊಯೆಟ್ಝರ್ ಗೆ ಕೆಲವು ಮಾರಣಾಂತಿಕ ಹೊಡೆತ ನೀಡಿದರು. ಇಬ್ಬರೂ ಬಾಕ್ಸರ್ ಗಳು ಜಡ್ಜ್ ಗಳ ಮನ ಗೆಲ್ಲಲು ಪ್ರಯತ್ನಿಸಿದರಾದರೂ, ಝರೀನ್ ತಮ್ಮ ಚತುರ ಪ್ರದರ್ಶನದಿಂದ ಮೇಲುಗೈ ಸಾಧಿಸಿದರು.
ಎರಡು ಸ್ಪರ್ಧಾತ್ಮಕ ಸುತ್ತಿನ ನಂತರ, ಮೂರನೆಯ ಸುತ್ತಿನಲ್ಲಿ ಝರೀನ್ ತಮ್ಮ ಎದುರಾಳಿಯ ಮೇಲೆ ನಿಖರ ದಾಳಿಗಳನ್ನು ನಡೆಸಿದರು. ಇದರಿಂದ ಸುಸ್ತಾದಂತೆ ಕಂಡು ಬಂದ ಕ್ಲೊಯೆಟ್ಝರ್, ಮೇಲೇಳಲು ಹರಸಾಹಸ ಪಡತೊಡಗಿದರು. ಅವರಿಗೆ ರೆಫ್ರಿಗಳು ಒಂದೆರಡು ಬಾರಿ ಎಚ್ಚರಿಕೆ ನೀಡಿದ ನಂತರ, ಝರೀನ್ ರನ್ನು ವಿಜಯಿ ಎಂದು ಘೋಷಿಸಿದರು.
ಜರ್ಮನಿ ಎದುರಾಳಿಯೆದುರು ಕಠಿಣ ಸ್ಪರ್ಧೆ ಎದುರಿಸಿರುವ ಝರೀನ್, ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಏಷ್ಯನ್ ಗೇಮ್ಸ್ ನ ಅಗ್ರ ಶ್ರೇಯಾಂಕಿತೆ ಹಾಗೂ ಹಾಲಿ ಫ್ಲೈವೆಯ್ಟ್ ವಿಶ್ವ ಚಾಂಪಿಯನ್ ಆದ ಚೀನಾದ ವು ಯು ಅವರನ್ನು ಎದುರಿಸಲಿದ್ದಾರೆ. ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವು ಯು ಬೈ ಪಡೆದಿದ್ದರು.