ಪ್ಯಾರಿಸ್ ಒಲಿಂಪಿಕ್ಸ್‌ | ಭಾರತದ ಹಾಕಿ ತಂಡಕ್ಕೆ ಮೊದಲು ಸೋಲು

Update: 2024-08-01 18:11 GMT

PC : NDTV

ಪ್ಯಾರಿಸ್ : ಭಾರತದ ಪುರುಷರ ಹಾಕಿ ತಂಡ ಗುರುವಾರ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಮ್ ವಿರುದ್ಧ 1-2 ಅಂತರದಿಂದ ಸೋತಿದೆ.

ಆರಂಭಿಕ ಮುನ್ನಡೆ ಪಡೆದ ಹೊರತಾಗಿಯೂ ಭಾರತವು ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಮೊದಲ ಸೋಲು ಕಂಡಿದೆ.

ಭಾರತದ ಪರ ಅಭಿಷೇಕ್ 18ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ದ್ವಿತಿಯಾರ್ಧದಲ್ಲಿ ಪ್ರಬಲ ಪ್ರತಿರೋಧ ಒಡ್ಡಿದ ಬೆಲ್ಜಿಯಮ್ ಪರ ಥಿಬೌ ಸ್ಟಾಕ್‌ಬ್ರೋಕ್ಸ್(33ನೇ ನಿಮಿಷ)ಹಾಗೂ ಜಾನ್ ಡೊಹ್ಮೆನ್ಸ್ (44ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಬೆಲ್ಜಿಯಮ್ ಪಂದ್ಯಾವಳಿಯಲ್ಲಿ ಅಜೇಯವಾಗುಳಿದಿದೆ.

ಭಾರತ ಹಾಗೂ ಬೆಲ್ಜಿಯಮ್ ತಂಡಗಳು ಬಿ ಗುಂಪಿನಿಂದ ಈಗಾಗಲೇ ಕ್ವಾರ್ಟರ್ ಫೈನಲ್ ತಲುಪಿವೆ.

ಭಾರತವು ಶುಕ್ರವಾರ ನಡೆಯಲಿರುವ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಹರ್ಮನ್‌ಪ್ರೀತ್ ಬಳಗವು ನ್ಯೂಝಿಲ್ಯಾಂಡ್ ವಿರುದ್ಧ 3-2, ಅರ್ಜೆಂಟೀನ ವಿರುದ್ಧ 1-1ರಿಂದ ಡ್ರಾ ಹಾಗೂ ಐರ್‌ಲ್ಯಾಂಡ್ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News