ಪ್ಯಾರಿಸ್ ಒಲಿಂಪಿಕ್ಸ್ | ಆರ್ಚರಿಯಲ್ಲಿ ಕಂಚು ಕಳೆದುಕೊಂಡ ಭಾರತ

Update: 2024-08-02 17:07 GMT

ಧೀರಜ್ ಬೊಮ್ಮದೇವರ, ಅಂಕಿತಾ ಭಕತ್  |PC : Olympics.com

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನ 7ನೇ ದಿನವಾದ ಶುಕ್ರವಾರ ಆರ್ಚರಿಗಳಾದ ಧೀರಜ್ ಬೊಮ್ಮದೇವರ ಹಾಗೂ ಅಂಕಿತಾ ಭಕತ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ 35-37 ಸೆಟ್ ಅಂತರದಿಂದ ಸೋತಿದ್ದಾರೆ. ಈ ಮೂಲಕ ಪದಕದಿಂದ ವಂಚಿತರಾದರು.

ಮಿಕ್ಸೆಡ್ ಟೀಮ್ ಸೆಮಿ ಫೈನಲ್‌ನಲ್ಲಿ ಕೊರಿಯಾ ವಿರುದ್ಧ 2-6 ಅಂತರದಿಂದ ಸೋತ ನಂತರ ಧೀರಜ್ ಹಾಗೂ ಅಂಕಿತಾ ಕಂಚಿನ ಪದಕದ ಸುತ್ತಿನಲ್ಲಿ ಆಡುವ ಅವಕಾಶ ಪಡೆದರು.

ಮಿಕ್ಸೆಡ್ ಟೀಮ್ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು 37-36 ಅಂತರದಿಂದ ಮಣಿಸಿದ್ದ ಭಾರತವು ಸೆಮಿ ಫೈನಲ್‌ಗೆ ಪ್ರವೇಶಿಸಿ ಪದಕದ ಭರವಸೆ ಮೂಡಿಸಿತ್ತು.

ಇದಕ್ಕೂ ಮೊದಲು ಧೀರಜ್ ಹಾಗೂ ಅಂಕಿತಾ ಅವರು ಇಂಡೋನೇಶ್ಯದ ದಿಯಾನಂದ ಹಾಗೂ ಆರಿಫ್‌ರನ್ನು 5-1ರಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News