ಪ್ಯಾರಿಸ್ ಒಲಿಂಪಿಕ್ಸ್ | ಕಂಚಿನ ಪಂದ್ಯದಲ್ಲಿ ಸೋತ ಲಕ್ಷ್ಯ ಸೇನ್

Update: 2024-08-05 14:00 GMT

ಲಕ್ಷ್ಯ ಸೇನ್ | PC : PTI 

ಪ್ಯಾರಿಸ್ : ಭಾರತದ ಭರವಸೆಯ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ಕಂಚಿನ ಪದಕಕ್ಕಾಗಿ ಸೋಮವಾರ ನಡೆದ ಪಂದ್ಯದಲ್ಲಿ ಮಲೇಶಿಯಾದ ಝೀ ಜಿಯಾ ಲೀ ವಿರುದ್ಧ ಸೋಲೊಪ್ಪಿಕೊಂಡರು.

ಮೂರು ಸೆಟ್ ಗಳ ವರೆಗೆ ನಡೆದ ಪಂದ್ಯದಲ್ಲಿ 21-13 ರಿಂದ ಮೊದಲ ಸೆಟ್ ಗೆದ್ದ ಲಕ್ಷ್ಯ ಸೇನ್ , ನಂತರದ ಸೆಟ್‌ಗಳಲ್ಲಿ ಪುಟಿದೇಳಲು ವಿಫಲರಾದರು. ಮೊಣಕೈ ಗಾಯವು ಅವರ ಹೊಡೆತಗಳಿಗೆ ಬ್ರೇಕ್ ನೀಡಿತು. ಉಳಿದ ಎರಡು ಸೆಟ್ ಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಮಲೇಶಿಯಾದ ಝೀ ಜಿಯಾ ಲೀ 16-21, 11-21 ಅಂಕಗಳಿಂದ ಕಂಚಿನ ಪದಕ ತಮ್ಮದಾಗಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News