ಭಾರತ ವಿರುದ್ಧ ಏಕದಿನ ಸರಣಿ ವೇಳೆ ಆಸ್ಟ್ರೇಲಿಯ ತಂಡಕ್ಕೆ ಪ್ಯಾಟ್ ಕಮಿನ್ಸ್ ವಾಪಸ್?
ಮೆಲ್ಬೋರ್ನ್: ಎಡ ಮಣಿಕಟ್ಟಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಭಾರತ ವಿರುದ್ಧ ಸೆಪ್ಟಂಬರ್ ಅಂತ್ಯಕ್ಕೆ ತಮ್ಮ ತಂಡ ಆಡಲಿರುವ ಮೂರು ಪಂದ್ಯಗಳ ಏಕದಿನ ಸರಣಿ ವೇಳೆಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ವಾಪಸಾಗುವತ್ತ ಚಿತ್ತಹರಿಸಿದ್ದೇನೆ ಎಂದು ಮಂಗಳವಾರ ಹೇಳಿದ್ದಾರೆ.
ಕಮಿನ್ಸ್ ದಿ ಓವಲ್ ನಲ್ಲಿ ಜುಲೈ 27ರಿಂದ 31ರ ತನಕ ನಡೆದ ಐದನೇ ಆ್ಯಶಸ್ ಟೆಸ್ಟ್ ಪಂದ್ಯದ ವೇಳೆ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದರು. ಅವರಿಗೆ ಆರು ವಾರಗಳ ವಿಶ್ರಾಂತಿಗೆ ಸಲಹೆ ನೀಡಲಾಗಿತ್ತು.
ವೇಗದ ಬೌಲರ್ ಸೆಪ್ಟಂಬರ್ 7ರಿಂದ 17ರ ತನಕ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ ತಂಡದಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯವು ಸೆಪ್ಟಂಬರ್ 22,24 ಹಾಗೂ 27ರಂದು ಭಾರತ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ.
ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರ ತನಕ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಆಡುವ ಕುರಿತಂತೆ ಕಮಿನ್ಸ್ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವಕಪ್ ನ ನಂತರ ಏಕದಿನ ನಾಯಕನಾಗಿ ನನ್ನ ಪಾತ್ರವನ್ನು ಮೌಲ್ಯಮಾಪನ ಮಾಡುವುದಾಗಿ ಕಮಿನ್ಸ್ ಹೇಳಿದ್ದಾರೆ.