ಪೂಜಾ ಜೀವನಶ್ರೇಷ್ಠ ಬೌಲಿಂಗ್: ಭಾರತದ ಮಹಿಳಾ ಕ್ರಿಕೆಟ್ ತಂಡ ಫೈನಲ್ ಗೆ

Update: 2023-09-24 18:10 GMT

Photo: twitter/thsportsfanatic

ಹಾಂಗ್ಝೌ: ಎಡಗೈ ವೇಗಿ ಪೂಜಾ ವಸ್ತ್ರಕರ್ ಅವರ ಜೀವನಶ್ರೇಷ್ಠ ಬೌಲಿಂಗ್(4-17) ಸಹಾಯದಿಂದ ರವಿವಾರ ಏಕಪಕ್ಷೀಯವಾಗಿ ಸಾಗಿದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಬಾಂಗ್ಲಾದೇಶವನ್ನು 8 ವಿಕೆಟ್ ಅಂತರದಿಂದ ಮಣಿಸಿತು. ಈ ಮೂಲಕ ಏಶ್ಯನ್ ಗೇಮ್ಸ್ ನಲ್ಲಿ ಮೊದಲ ಬಾರಿ ಫೈನಲ್ ಗೆ ಲಗ್ಗೆ ಇಟ್ಟಿದೆ.

ಅಂಜಲಿ ಸರ್ವಾನಿ ಬದಲಿಗೆ ಆಡಿದ ಪೂಜಾ 4 ಓವರ್ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದು ಭಾರತವು 17.5 ಓವರ್ಗಳಲ್ಲಿ ಬಾಂಗ್ಲಾದೇಶವನ್ನು ಕೇವಲ 51 ರನ್ ಗೆ ಆಲೌಟ್ ಮಾಡಿತು. ಬಾಂಗ್ಲಾವು ಭಾರತ ವಿರುದ್ಧ ಅತ್ಯಂತ ಕನಿಷ್ಠ ಮೊತ್ತಕ್ಕೆ ಸರ್ವಪತನವಾಯಿತು. ನಾಯಕಿ ನಿಗಾರ್ ಸುಲ್ತಾನಾ(12) ಎರಡಂಕೆಯ ಸ್ಕೋರ್ ಗಳಿಸಿದರು.

ಗೆಲ್ಲಲು 52 ರನ್ ಗುರಿ ಬೆನ್ನಟ್ಟಿದ ಭಾರತವು ಕೇವಲ 8.2 ಓವರ್ಗಳಲ್ಲಿ ಗುರಿ ತಲುಪಿತು. ಜೆಮಿಮಾ ರೋಡ್ರಿಗಸ್(ಔಟಾಗದೆ 20) ಹಾಗೂ ಶೆಫಾಲಿ(17 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News