ಅತ್ಯಾಚಾರ ಪ್ರಕರಣ: ಜಾಮೀನು ಪಡೆದು ಜೈಲಿನಿಂದ ಹೊರಬಂದ ಫುಟ್ಬಾಲ್ ಆಟಗಾರ ಡಾನಿ ಆಲ್ವಿಸ್

Update: 2024-03-20 16:59 GMT

ಡಾನಿ ಆಲ್ವಿಸ್ | Photo: NDTV 

ಸಾವೊಪೌಲೊ : ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಬ್ರೆಝಿಲ್ ನ ಮಾಜಿ ಅಂತರ್ರಾಷ್ಟ್ರೀಯ ಫುಟ್ಬಾಲ್ ಆಟಗಾರ ಡಾನಿ ಆಲ್ವಿಸ್ 1.08 ಮಿಲಿಯ ಡಾಲರ್ (ಸುಮಾರು 9 ಕೋಟಿ ರೂಪಾಯಿ) ಪಾವತಿಸಿ ಜಾಮೀನು ಪಡೆದು ಹೊರಬರಲಿದ್ದಾರೆ.

40 ವರ್ಷದ ಆಟಗಾರನನ್ನು 2023 ಜನವರಿಯಲ್ಲಿ ಬಂಧಿಸಲಾಗಿತ್ತು. ಅವರಿಗೆ ನ್ಯಾಯಾಲಯವು ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಅವರು ಈಗಾಗಲೇ ತನ್ನ ಜೈಲು ಅವಧಿಯ ಕಾಲುಭಾಗವನ್ನು ಜೈಲಿನಲ್ಲಿ ಕಳೆದಿರುವುದರಿಂದ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಬೇಕು ಎಂಬುದಾಗಿ ಅವರ ವಕೀಲರು ನ್ಯಾಯಾಲಯದಲ್ಲಿ ಮಂಗಳವಾರ ಮನವಿ ಮಾಡಿದ್ದರು. ನ್ಯಾಯಾಲಯವು ಬುಧವಾರ ಅವರಿಗೆ ಜಾಮೀನು ನೀಡಿದೆ.

ಅವರು 2022 ಡಿಸೆಂಬರ್ನಲ್ಲಿ ಬಾರ್ಸಿಲೋನ ನೈಟ್ ಕ್ಲಬ್ ಒಂದರಲ್ಲಿ ಯುವತಿಯ ಮೇಲೆ ಅತ್ಯಾಚಾರಗೈದಿದ್ದರು ಎಂಬುದಾಗಿ ಆರೋಪಿಸಲಾಗಿತ್ತು. ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಲಯವು ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News