ಜೈಂಟ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯಭೇರಿ ಭಾರಿಸಿದ ಆರ್ ಸಿ ಬಿ

Update: 2024-02-27 17:06 GMT

Photo : x/@wplt20

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಗುಜರಾಜ್ ಜೈಂಟ್ಸ್ ವಿರುದ್ಧ ರೋಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಜೈಂಟ್ಸ್ ನೀಡಿದ್ದ 108 ರನ್ ಗಳ ಬೆನ್ನತ್ತಿದ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7.3 ಓವರ್ ಬಾಕಿಯಿರುವಂತೆ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಆರ್‌ಸಿಬಿ ಇನ್ನಿಂಗ್ಸ್‌ ಆರಂಭಿಸಿದ ಸ್ಮೃತಿ ಮಂದಾನ, ಸೋಫಿ ಡಿವೈನ್‌ ತಂಡಕ್ಕೆ ಉತ್ತಮ ಆರಂಭ ನೀಡಿದರು. ಸೋಫಿ ಡಿವೈನ್‌ 6 ಎಸೆತಗಳಲ್ಲಿ 1 ಬೌಂಡರಿ ಸಹಿತ 6 ರನ್‌ ಗಳಿಸಿ ಅಶ್ಲೇಜ್‌ ಗಾರ್ಡ್‌ನರ್‌ ಅವರ ಎಸೆತದಲ್ಲಿ ಮೇಘನಾ ಸಿಂಗ್‌ ಗೆ ಕ್ಯಾಚಿತ್ತು ನಿರ್ಗಮಿಸಿದರು. ನಾಯಕಿಯ ಆಟವಾಡಿದ ಸ್ಮೃತಿ ಮಂದಾನ 27 ಎಸೆತಗಳಲ್ಲಿ 43 ರನ್‌ ಗಳಿಸಿ ಉತ್ತಮ ಆಟವಾಡಿದರು.  8 ಬೌಂಡರಿ 1 ಸಿಕ್ಸರ್‌ ಬಾರಿಸಿದ ಸ್ಮೃತಿ ಅವರು ತನುಜಾ ಕನ್ವರ್‌ ಅವರ ಬೌಲಿಂಗ್‌ ನಲ್ಲಿ ಕಾಟ್‌ ಆಂಡ್‌ ಬೌಲ್ಡ್‌ ಆದರು.

ಸ್ಮೃತಿ ಮಂದಾನ ಅವರ ಹಾದಿಯಲ್ಲಿ ಮುಂದುವರೆದ ಸಬ್ಬಿನೇನಿ ಮೇಘನಾ ಭರ್ಜರಿ ಆಟವಾಡಿದರು. 28 ಎಸೆತ ಎದುರಿಸಿದ ಅವರು 5 ಬೌಂಡರಿ ಸಹಿತ ಒಂದು ಸಿಕ್ಸರ್‌ ನೊಂದಿಗೆ 36 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ಎಲಿಸ ಪೆರ್ರಿ 14 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್‌ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. 12.3 ಓವರ್‌ ಗಳಲಿ ಆರ್‌ಸಿಬಿ ತಂಡವು 2 ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು.

ಗುಜರಾತ್‌ ಜೈಂಟ್‌ ಪರ ತನುಜಾ ಕನ್ವರ್‌, ಅಶ್ಲೇಜ್‌ ಗಾರ್ಡ್‌ನರ್‌ ತಲಾ ಒಂದು ವಿಕೆಟ್‌ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News