ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ರಿಷಭ್ ಪಂತ್
Update: 2024-10-18 17:24 GMT
ಬೆಂಗಳೂರು : ಮೊದಲ ಟೆಸ್ಟ್‌ನ 2ನೇ ದಿನದಾಟದಲ್ಲಿ ಮೊಣಕಾಲಿನ ನೋವಿಗೆ ಒಳಗಾಗಿದ್ದ ಭಾರತದ ವಿಕೆಟ್‌ಕೀಪರ್- ಬ್ಯಾಟರ್ ರಿಷಭ್ ಪಂತ್ ಶುಕ್ರವಾರ ಬ್ಯಾಟಿಂಗ್ ಅಭ್ಯಾಸ ನಡೆಸಿ ಟೀಮ್ ಇಂಡಿಯಾಕ್ಕೆ ಶುಭ ಸುದ್ದಿ ಕೊಟ್ಟಿದ್ದಾರೆ.
3ನೇ ದಿನದಾಟದ ಟೀ ವಿರಾಮದ ವೇಳೆಗೆ ಒಂದೇ ಪ್ಯಾಡ್ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ ಪಂತ್ ಅವರು ಸಹಾಯಕ ಕೋಚ್ ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ಥ್ರೋಡೌನ್ಸ್ ಎದುರಿಸಿದರು.
ಥ್ರೊ ಡೌನ್ಸ್ ಎದುರಿಸಲು ತನ್ನ ತರಬೇತಿ ಕಿಟ್‌ಗಳೊಂದಿಗೆ ಪಂತ್ ಮೈದಾನಕ್ಕೆ ಇಳಿದಾಗ ಬೆಂಗಳೂರು ಪ್ರೇಕ್ಷಕರು ಸಂಭ್ರಮಪಟ್ಟರು.